Home ಟಾಪ್ ಸುದ್ದಿಗಳು ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರನ್ನು ಬೆಳೆಸಬೇಕು: ಡಿಕೆ ಶಿವಕುಮಾರ್

ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರನ್ನು ಬೆಳೆಸಬೇಕು: ಡಿಕೆ ಶಿವಕುಮಾರ್

ತುಮಕೂರು: ಬೆಂಗಳೂರಿನ ಜನ ನಿಯಂತ್ರಣ ಮಾಡಲು ತುಮಕೂರು ಜಿಲ್ಲೆ ಸೂಕ್ತವಾಗಿದ್ದು, ಬೆಂಗಳೂರಿನ ಮುಂದಿನ 50 ವರ್ಷಗಳ ಅಭಿವೃದ್ಧಿಗಾಗಿ ತುಮಕೂರು ಜಿಲ್ಲೆಯನ್ನು ಈಗಿಂದಲೇ ಅಭಿವೃದ್ಧಿ ಮಾಡಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.


ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರ, ಶೈಕ್ಷಣಿಕ ಜಿಲ್ಲೆ ಇರುವುದು ತುಮಕೂರು ಜಿಲ್ಲೆ. ಹೆಚ್ಎಎಲ್ ಈ ಜಿಲ್ಲೆಗೆ ಬಂದಿದ್ದು, ಕೈಗಾರಿಕಾ ಪ್ರದೇಶ ಇರುವ ಕಾರಣ ಈ ಭಾಗಕ್ಕೆ ಹೆಚ್ಚು ಒತ್ತು ಕೊಡಬೇಕಿದೆ ಎಂದರು. ಚುನಾವಣೆ ಮುನ್ನ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಇಂದು ಎಲ್ಲರ ಮನೆಗೂ ಹಣ ಹೋಗುತ್ತಿದೆ. ಅನ್ನಭಾಗ್ಯ ಸಿದ್ದರಾಮಯ್ಯ ಕನಸಿನ ಭಾಗ್ಯ ಎಂದರು.

Join Whatsapp
Exit mobile version