Home ಟಾಪ್ ಸುದ್ದಿಗಳು ತುಮಕೂರು: ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ವಿರುದ್ಧ ಸಡ್ಡು ಹೊಡೆದ ಮಹಿಳೆಯರು

ತುಮಕೂರು: ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ವಿರುದ್ಧ ಸಡ್ಡು ಹೊಡೆದ ಮಹಿಳೆಯರು

ಬೆಂಗಳೂರು: ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಸ್ಥಳದಲ್ಲಿದ್ದ ಮಹಿಳೆಯರು ಸೆಟೆದು ನಿಂತು ಹೋರಾಟ ನಡೆಸಿದ ಘಟನೆ ಕುಣಿಗಲ್ ನಿಂದ ವರದಿಯಾಗಿದೆ.

ಕ್ರಿಸ್ಮಸ್ ಆಚರಣೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಸಂಘಪರಿವಾರದ ಕಾರ್ಯಕರ್ತರು ಹಿಂದೂಗಳಂತೆ ನೀವು ಯಾಕೆ ಸಿಂಧೂರ ಧರಿಸುತ್ತಿಲ್ಲ ಮತ್ತು ಕ್ರಿಸ್ಮಸ್ ಯಾಕೆ ಆಚರಿಸುತ್ತಿದ್ದೀರಿ ಎಂದು ಮಹಿಳೆಯರನ್ನು ಗದರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವೇಳೆ ಧೃತಿಗೆಡದ ಮಹಿಳೆಯರು ನಾವು ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆಯುಳ್ಳವರು ಮತ್ತು ಕ್ರಿಸ್ಮಸ್ ಆಚರಣೆ ಮಾಡಲು ಉತ್ಸುಕರಾಗಿದ್ದೇವೆ ಎಂದು ಪ್ರತಿಕ್ರಿಯಿಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp
Exit mobile version