Home ಟಾಪ್ ಸುದ್ದಿಗಳು ಗೂಗಲ್ ಟ್ರಾನ್ಸ್ ಲೇಟರ್ ಪಟ್ಟಿಗೆ ಸೇರಿದ ತುಳು ಭಾಷೆ

ಗೂಗಲ್ ಟ್ರಾನ್ಸ್ ಲೇಟರ್ ಪಟ್ಟಿಗೆ ಸೇರಿದ ತುಳು ಭಾಷೆ

ಗೂಗಲ್ ಟ್ರಾನ್ಸ್ಲೇಟರ್ ನಲ್ಲಿ ಇಲ್ಲಿಯವರೆಗೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಭಾರತದ ಪ್ರಮುಖ ಭಾಷೆಗಳ ಭಾಷಾಂತರ ಸೌಲಭ್ಯ ಮಾತ್ರ ಲಭ್ಯವಿತ್ತು. ಇದೀಗ ಗೂಗಲ್ ಅನುವಾದ ಪಟ್ಟಿಗೆ ತುಳು ಭಾಷೆಯೂ ಕೂಡಾ ಸೇರ್ಪಡೆಯಾಗಿದೆ.

ಈ ಮೂಲಕ ಟೆಕ್ ದೈತ್ಯ ಗೂಗಲ್ ನಲ್ಲಿ ತುಳುವಿಗೂ ಗೌರವ ಸಿಕ್ಕಂತಾಗಿದೆ. ಈ ವಿಚಾರ ತುಳುವರಿಗೆ ಸಂತಸವನ್ನು ತಂದಿದೆ.

ಇನ್ನು ಮುಂದೆ ತುಳು ಭಾಷಿಗರು ಇಂಗ್ಲೀಷ್ ಅಥವಾ ಇನ್ನಾವುದೇ ಪದಗಳನ್ನು ಗೂಗಲ್ ಟ್ರಾನ್ಸ್ಲೇಟರ್ನಲ್ಲಿ ನೇರವಾಗಿ ತುಳುವಿನಲ್ಲಿಯೇ ಅರ್ಥೈಸಿಕೊಳ್ಳಬಹುದು. ಅಲ್ಲದೆ ಇದು ಅನ್ಯ ಭಾಷಿಗರಿಗೆ ತುಳು ಪದಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಅನುಕೂಲಕರವಾಗಿದೆ

Join Whatsapp
Exit mobile version