ದಾವಣಗೆರೆ: ಬರಗೂರು ಪಠ್ಯಪುಸ್ತಕ ಪರಿಷ್ಕರಣೆಯ ಹಿಂದೆ ತುಕಡೆ ಗ್ಯಾಂಗ್ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. ಜೆಎನ್ ಯುನಲ್ಲಿ ಇರುವುದು ತುಕುಡೆ ಗ್ಯಾಂಗ್. ಇದೇ ಗ್ಯಾಂಗ್ ಪಾಕಿಸ್ತಾನ ಧ್ವಜ ಹಾರಿಸಿದೆ. ಇದೇ ಗ್ಯಾಂಗ್ ಬರಗೂರು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಹಿಂದೆಯೂ ಇದೆ. ಜೆಎನ್ ಯು ಪ್ರೊಫೆಸರ್ ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಗಂಭೀರ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯದಲ್ಲಿ ಬಸವಣ್ಣನಿಗೆ ಯಾವುದೇ ಅವಮಾನ ಮಾಡಿಲ್ಲ. ಬರಗೂರು ಸಮಿತಿಯ ಪಠ್ಯದಲ್ಲಿ ಏನಿದೆಯೋ ಅದೇ ಈಗಲೂ ಇದೆ. ಜನಿವಾರ ಕಿತ್ತು ಹಾಕಿ ಹೋದರು. ಎಂದು ಅಲ್ಲಿತ್ತು. ಉಪನಯನ ಆಗಿ ಹೋದರು ಎಂಬುದು ಇಲ್ಲಿದೆ. ಅದರಲ್ಲಿ ಅವಮಾನ ಅಗುವಂಥದ್ದೇನಿದೆ ಎಂದು ಪ್ರಶ್ನಿಸಿದರು.
ಹಿಂದೂ ಸಮಾಜವನ್ನು ಒಡೆಯಲು, ದೇಶ ಇಬ್ಬಾಗ ಮಾಡಲು ತುಕುಡೆ ಗ್ಯಾಂಗ್ ಹಿಂದಿನಿಂದಲೂ ಕೆಲಸ ಮಾಡುತ್ತಿತ್ತು. ಅದನ್ನು ನಾವು ಹೇಳುವಾಗ ನಂಬಿರಲಿಲ್ಲ. ಈಗ ಅದು ನಿಜವಾಗಿದೆ ಎಂದರು.