Home ಟಾಪ್ ಸುದ್ದಿಗಳು ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ: ಕೋರ್ಟ್ ಆದೇಶದ ಬಳಿಕ ರಾಹುಲ್ ಮೊದಲ ಪ್ರತಿಕ್ರಿಯೆ

ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ: ಕೋರ್ಟ್ ಆದೇಶದ ಬಳಿಕ ರಾಹುಲ್ ಮೊದಲ ಪ್ರತಿಕ್ರಿಯೆ

ದೆಹಲಿ: ಸತ್ಯ ಗೆಲ್ಲುತ್ತದೆ, ನನ್ನ ಹಾದಿ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ನಮ್ಮ ಜೊತೆ ನಿಂತ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದ ನಂತರ ರಾಹುಲ್ ಇಂದು(ಶುಕ್ರವಾರ) ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ್ದಾರೆ.


“ಆಜ್ ನಹೀ ತೋಹ್ ಕಲ್, ಕಲ್ ನಹೀ ತೋ ಪರ್ಸೋ ಸಚ್ ಕಿ ಜೀತ್ ಹೋತಿ ಹೈ ( ಇವತ್ತು ಅಲ್ಲದಿದ್ದರೆ ನಾಳೆ, ನಾಳೆ ಅಥವಾ ನಾಡಿದ್ದು ಸತ್ಯ ಗೆದ್ದೇ ಗೆಲ್ಲುತ್ತದೆ). ನನ್ನ ಹಾದಿ ಸ್ಪಷ್ಟವಾಗಿದೆ. ನಾನು ಏನು ಮಾಡಬೇಕು ಮತ್ತು ನನ್ನ ಕೆಲಸ ಏನು ಎಂದು ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇದೆ. ನಮಗೆ ಸಹಾಯ ಮಾಡಿದ ಜನರಿಗೆ ನಾನು ಧನ್ಯವಾದಗಳು . ಜನರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಸಹ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

Join Whatsapp
Exit mobile version