ಕೋರ್ಟ್ ತೀರ್ಪು: ‘ಸತ್ಯವೇ ನನ್ನ ದೇವರು’ ಎಂದ ರಾಹುಲ್ ಗಾಂಧಿ

Prasthutha|

ನವದೆಹಲಿ: ಪ್ರಧಾನಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಗುಜರಾತ್’ನ ಸೂರತ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ಸತ್ಯವೇ ನನ್ನ ದೇವರು ಎನ್ನುತ್ತ ಮಹಾತ್ಮ ಗಾಂಧೀಜಿಯವರ ಸಾಲುಗಳನ್ನು ಬರೆದುಕೊಂಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿವ ಅವರು, ನನ್ನ ಧರ್ಮ ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು. ಅದನ್ನು ಪಡೆಯುವ ಸಾಧನ ಅಹಿಂಸೆ ಎಂಬ ಬಾಪೂಜಿಯವರ ಸಾಲನ್ನು ಹಂಚಿಕೊಂಡಿದ್ದಾರೆ.

ಸೂರತ್ ಕೋರ್ಟಿನ ಮುಖ್ಯ ಮ್ಯಾಜಿಸ್ಟ್ರೇಟ್ ಎಚ್. ಎಚ್. ವರ್ಮಾ ಅವರು ಭಾರತೀಯ ದಂಡ ಸಂಹಿತೆ 499 ಮತ್ತು 500ರಡಿ ರಾಹುಲ್ ತಪ್ಪಿತಸ್ಥ ಎಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆನ್ನಿಗೇ ಜಾಮೀನು ನೀಡಿ, ಮೇಲಿನ ಕೋರ್ಟಿಗೆ ಅಪೀಲು ಹೋಗಲವಕಾಶವಾಗುವಂತೆ ಶಿಕ್ಷೆಯನ್ನು 30 ದಿನ ಮುಂದೂಡಿದೆ.

- Advertisement -

2019ರಲ್ಲಿ ಕರ್ನಾಟಕದಲ್ಲಿ ಮಾತನಾಡುತ್ತ ರಾಹುಲ್ ಗಾಂಧಿಯವರು ಎಲ್ಲ ಕಳ್ಳರ ಸರ್ ನೇಮ್ ಗಳು ಮೋದಿ ಎಂದಿರುವುದೇಕೆ ಎಂದಿದ್ದರು. ಅದರ ವಿರುದ್ಧದ ಮೊಕದ್ದಮೆಯಲ್ಲಿ ಶಿಕ್ಷೆ ಘೋಷಿಸುವಾಗ ರಾಹುಲ್ ಅವರು ಕೋರ್ಟಿನಲ್ಲಿ ಹಾಜರಿದ್ದರು.

ಕೂಡಲೆ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣದಲ್ಲಿ ಮಹಾತ್ಮಾ ಗಾಂಧೀಜಿಯವರ ಮಾತನ್ನು ನೀಡಿದ್ದಾರೆ.

“ಸತ್ಯ ಮತ್ತು ಅಹಿಂಸೆಯ ಮೇಲೆ ನನ್ನ ಧರ್ಮ ನಿಂತಿದೆ. ಸತ್ಯವೇ ನನ್ನ ದೇವರು. ದೇವರನ್ನು ಸಾಕ್ಷಾತ್ಕಾರಗೊಳಿಸುವುದೇ ಅಹಿಂಸೆ” ಇದನ್ನು ರಾಹುಲ್ ರು ತನ್ನ ಟ್ವಿಟರ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಪ್ರಕಟಿಸಿದ್ದಾರೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ ನಂತೆ ಮೊಕದ್ದಮೆ ಎಂದು ಹೇಳಲಾಗಿದೆಯಾದರೂ ಆರಂಭದಿಂದಲೂ ಅದು ಕ್ರಮವಾಗಿ ನಡೆದಿಲ್ಲ ಎಂದು ರಾಹುಲ್ ಅವರ ವಕೀಲರು ವಾದಿಸಿದರು.

ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸಂಬಂಧವಾಗಿ ರಾಹುಲ್ ಅವರು ಹೇಳಿಲ್ಲ, ಅವರ ಗುರಿ ಪ್ರಧಾನಿ ಮೋದಿಯವರ ಮೇಲೆ ಇತ್ತು ಎಂದೂ ವಕೀಲರು ಹೇಳಿದರು.

Join Whatsapp