Home ಕರಾವಳಿ ಪುತ್ತೂರು | ಟ್ರಸ್ಟ್ ಅಧ್ಯಕ್ಷನಿಂದ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

ಪುತ್ತೂರು | ಟ್ರಸ್ಟ್ ಅಧ್ಯಕ್ಷನಿಂದ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಆರೋಪಿಯನ್ನು ಅಂಬೇಡ್ಕರ್ ಅಪತ್ಬಾಂಧವ ಟ್ರಸ್ಟ್ ನ ಅಧ್ಯಕ್ಷ ರಾಜು ಹೊಸ್ಮಠ ಎಂದು ಗುರುತಿಸಲಾಗಿದೆ.

ಮೂಲತಃ ಕೌಡಿಚ್ಚಾರ್‌ ನವರಾದ ಸಂತ್ರಸ್ತೆಯ ಕುಟುಂಬ ಸದ್ಯ ಪುತ್ತೂರಿನಲ್ಲಿ ವಾಸಿಸುತ್ತಿದ್ದಾರೆ. 2019ರಿಂದ ಆರೋಪಿ ರಾಜುಗೆ ಸಂತ್ರಸ್ತೆಯ ಪರಿಚಯವಿದೆ ಎನ್ನಲಾಗಿದೆ. ಆರೋಪಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆತನ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಅಪ್ರಾಪ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version