Home ವಿದೇಶ ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ಅನರ್ಹ: ಕಮಲಾ ಹ್ಯಾರಿಸ್

ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ಅನರ್ಹ: ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ತೀವ್ರ ವಾಗ್ದಾಳಿ ನಡೆಸಿದ್ದು, ದೇಶವನ್ನು ಮುನ್ನಡೆಸಲು ಟ್ರಂಪ್ ಅನರ್ಹ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ, ಅಡಾಲ್ಫ್ ಹಿಟ್ಲರ್‌ನಂತಹ ಜನರಲ್‌ಗಳು ತನಗೆ ಬೇಕು ಎಂದು ಬಯಸಿದ್ದರು ಎಂಬುದಾಗಿ ಅವರ ಆಡಳಿತದಲ್ಲಿದ್ದ ಸಿಬ್ಬಂದಿ ವಿಭಾಗದ ಮುಖ್ಯಸ್ಥ, ನಿವೃತ್ತ ಜನರಲ್ ಜಾನ್ ಕೆಲ್ಲಿ ಹೇಳಿರುವುದಾಗಿ ಕಮಲಾ ಆರೋಪಿಸಿದ್ದಾರೆ.

ಅಮೆರಿಕದ ಸಂವಿಧಾನಕ್ಕೆ ನಿಷ್ಠವಾಗಿರುವ ಮಿಲಿಟರಿ ಟ್ರಂಪ್ ಅವರಿಗೆ ಬೇಕಿರಲಿಲ್ಲ. ತನಗೆ ನಿಷ್ಠವಾಗಿರುವ ಮಿಲಿಟರಿಯನ್ನು ಅವರು ಬಯಸಿದ್ದರು. ಕಾನೂನನ್ನು ಮುರಿದಾದರೂ ಅಥವಾ ಸಂವಿಧಾನದಡಿ ತೆಗೆದುಕೊಂಡ ಪ್ರಮಾಣವನ್ನು ಮೀರಿ ತಾವು ನೀಡಿದ ಆದೇಶ ಪಾಲಿಸಬೇಕೆಂದು ಬಯಸುತ್ತಿದ್ದರು ಎಂಬುದಾಗಿ ತಮ್ಮ ಅಧಿಕೃತ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ.

Join Whatsapp
Exit mobile version