ಜೋ ಬೈಡೆನ್ ಅವರನ್ನು ಸೆಕೆಂಡುಗಳಲ್ಲಿ ಹೊಡೆದುರುಳಿಸುವೆ ಎಂದ ಡೊನಾಲ್ಡ್ ಟ್ರಂಪ್!

Prasthutha|

ಫ್ಲೋರಿಡಾ: ಬಾಕ್ಸಿಂಗ್ ಆಡಿದರೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಸೆಕೆಂಡುಗಳಲ್ಲಿ ಹೊಡೆದುರುಳಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

- Advertisement -

ಫ್ಲೋರಿಡಾದ ಹಾಲಿವುಡ್ ಸೆಮಿನೋಲ್ ಹಾರ್ಡ್ ರಾಕ್ ಕ್ಯಾಸಿನೊದಲ್ಲಿ ಇವಾಂಡರ್ ಹೋಲಿಫೀಲ್ಡ್ ಮತ್ತು ವಿಟ್ಟರ್ ಬೆಲ್ಫೋರ್ಟ್ ನಡುವಿನ ಬಾಕ್ಸಿಂಗ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇವಾಂಡರ್ ಹೋಲಿಫೀಲ್ಡ್-ವಿಟರ್ ಬೆಲ್‌ಫೋರ್ಟ್ ಹೋರಾಟದಲ್ಲಿ ಟ್ರಂಪ್ ಕಾಮೆಂಟರಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ದೂರವಾಣಿ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಟ್ರಂಪ್ ಬಳಿ ನೀವು ಯಾರ ಜೊತೆಯಾದರೂ ಬಾಕ್ಸಿಂಗ್ ಆಡಲು ಬಯಸುತ್ತೀರಾ? ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಟ್ರಂಪ್ ಈ ರೀತಿ ಉತ್ತರಿಸಿದ್ದಾರೆ.

- Advertisement -

“ನಾನು ಜಗತ್ತಿನಲ್ಲಿ ಯಾರನ್ನಾದರೂ ಬಾಕ್ಸಿಂಗ್ ಆಡಲು ಆಯ್ಕೆ ಮಾಡುವುದಾದರೆ, ನಾನು ವೃತ್ತಿಪರ ಬಾಕ್ಸರ್‌ಗಳನ್ನು ಆಯ್ಕೆ ಮಾಡದೆ ನನ್ನ ಸುಲಭದ ಹೋರಾಟಗಾರ ಜೋ ಬೈಡನ್ ವಿರುದ್ಧ ನಾನು ಹೋರಾಡುವೆ. ಏಕೆಂದರೆ ನಾನು ಅವರನ್ನು ಕೇವಲ ಸೆಕೆಂಡುಗಳಲ್ಲಿ ಹೊಡೆದುರುಳಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಟ್ರಂಪ್ ಹೇಳಿದ್ದಾರೆ.



Join Whatsapp