ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಕಲಹ ಮತ್ತಷ್ಟು ಬಿರುಸು ಪಡೆದುಕೊಂಡಿದೆ.ಬೈಡನ್ ತನ್ನ ಹೆಸರನ್ನು ಉಪಯೋಗಿಸಿ ಅಮೆರಿಕವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಬೈಡನ್ ಸಂಪೂರ್ಣವಾಗಿ ಆಡಳಿತದಲ್ಲಿ ವಿಫಲರಾಗಿದ್ದಾರೆ ಎಂಬ ಅಂಶವನ್ನು ಮರೆಮಾಚಲು ಮಾಡಿರುವ ರಾಜಕೀಯ ನಾಟಕವಾಗಿದೆ. ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಕ್ಯಾಪಿಟಲ್ ಕಲಾಪದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಡಿದ ಭಾಷಣಕ್ಕೆ ಉತ್ತರವಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಜನವರಿ 6 ರಂದು ಅಮೆರಿಕದ ಸಂಸತ್ ಭವನ ಕ್ಯಾಪಿಟಲ್ ಮೇಲಿನ ದಾಳಿಯ ನೇತೃತ್ವವನ್ನು ಟ್ರಂಪ್ ವಹಿಸಿದ್ದರು ಎಂದು ಬೈಡನ್ ಆರೋಪಿಸಿದ್ದರು. ಟ್ರಂಪ್ ಮತ್ತು ಅವರ ಬೆಂಬಲಿಗರು ಅಮೆರಿಕದ ಕುತ್ತಿಗೆಗೆ ಕತ್ತಿ ಹಿಡಿದಿದ್ದಾರೆ. ಟ್ರಂಪ್ ದೇಶದ ಹಿತಾಸಕ್ತಿಗಿಂತ ತಮ್ಮ ಸ್ವಂತ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಾರೆ. 2020 ರ ಚುನಾವಣೆಯ ಬಗ್ಗೆ ಟ್ರಂಪ್ ಹಲವಾರು ಸುಳ್ಳುಗಳನ್ನು ಹೆಣೆದಿದ್ದಾರೆ ಎಂದು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದರು.