Home ಟಾಪ್ ಸುದ್ದಿಗಳು ಶಿರೂರು ಗುಡ್ಡ ಕುಸಿತ: 7 ದಿನದಿಂದ ನಿಂತಲ್ಲೇ ನಿಂತ ಲಾರಿಗಳು, ಚಾಲಕರ ಪರದಾಟ

ಶಿರೂರು ಗುಡ್ಡ ಕುಸಿತ: 7 ದಿನದಿಂದ ನಿಂತಲ್ಲೇ ನಿಂತ ಲಾರಿಗಳು, ಚಾಲಕರ ಪರದಾಟ

ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 7 ದಿನಗಳಿಂದ ನೂರಾರು ಲಾರಿಗಳು ಮುಂದೆ ಹೋಗಲು ಆಗದೆ, ನಿಂತಲ್ಲೇ ನಿಲ್ಲಲು ಆಗದೆ ಪರದಾಡುಂವತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೀಗ ಸ್ಥಳೀಯರು ಚಾಲಕರ ನೆರವಿಗೆ ಮುಂದಾಗಿದ್ದು, ಅಂಕೋಲಾ ಚಾಲಕರ ಸಂಘದಿಂದ ಪ್ರತಿಭಟನೆ ಮಾಡಿದ್ದಾರೆ. ಆ ಮೂಲಕ ಚಾಲಕರನ್ನು ರಕ್ಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಲಾಗಿದೆ.


ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 7 ದಿನವಾಗಿದೆ. ಇನ್ನೂ ಕಾರ್ಯಚರಣೆ ಮುಂದುವರಿದ ಪರಿಣಾಮ ಹೆದ್ದಾರಿ ಪಕ್ಕದಲ್ಲೇ ನೂರಾರು ಲಾರಿಗಳು ನಿಂತುಕೊಂಡಿವೆ. ಉಪಹಾರ, ಊಟ, ಶೌಚಾಲಯಕ್ಕೂ ಲಾರಿ ಚಾಲಕರು ಪರದಾಡುವಂತಾಗಿದೆ.

Join Whatsapp
Exit mobile version