Home ಟಾಪ್ ಸುದ್ದಿಗಳು ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಟ್ರಕ್ ಡಿಕ್ಕಿ: ಕಾರನ್ನು 500 ಮೀಟರ್ ವರೆಗೆ ಎಳೆದೊಯ್ದ ಟ್ರಕ್

ಸಮಾಜವಾದಿ ಪಕ್ಷದ ನಾಯಕನ ಕಾರಿಗೆ ಟ್ರಕ್ ಡಿಕ್ಕಿ: ಕಾರನ್ನು 500 ಮೀಟರ್ ವರೆಗೆ ಎಳೆದೊಯ್ದ ಟ್ರಕ್

ಮೈನ್ ಪುರಿ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕರೊಬ್ಬರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ಭಾನುವಾರ ನಡೆದಿದೆ.

ಭಾನುವಾರ ತಡರಾತ್ರಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಅವರು ಕರ್ಹಾಲ್ ರಸ್ತೆಯ ಮೂಲಕ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಮೈನ್ ಪುರಿ ಸದರ್ ಕೊತ್ವಾಲಿ ಪ್ರದೇಶದ ಭದಾವರ್ ಹೌಸ್ ಬಳಿ ಈ ಘಟನೆ ನಡೆದಿದ್ದು, ಘಟನೆಯ ಸಮಯದಲ್ಲಿ ಅವರು ಕಾರಿನಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಯಾದವ್ ಪಾರಾಗಿದ್ದಾರೆ.

ಘಟನೆಯ ನಂತರ, ಯಾದವ್ ಮೈನ್ ಪುರಿ ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.

Join Whatsapp
Exit mobile version