Home ಟಾಪ್ ಸುದ್ದಿಗಳು TRP ಹಗರಣ | ‘ರಿಪಬ್ಲಿಕ್ ಟಿವಿ’ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮಹತ್ವದ ಸಾಕ್ಷಿ ಪತ್ತೆ...

TRP ಹಗರಣ | ‘ರಿಪಬ್ಲಿಕ್ ಟಿವಿ’ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮಹತ್ವದ ಸಾಕ್ಷಿ ಪತ್ತೆ ಹಚ್ಚಿದ ಪೊಲೀಸರು

ಮುಂಬೈ : ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ ಪಿ) ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ಯಾವುದೇ ಬಲವಂತದ ಕ್ರಮದಿಂದ ಗೋಸ್ವಾಮಿಗೆ ರಕ್ಷಣೆ ನೀಡುವುದನ್ನು ಮುಂದುವರಿಸಬಾರದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆದರೆ, ಹೈಕೋರ್ಟ್ ಈ ವಿಷಯದ ವಿಚಾರಣೆಯನ್ನು ಮುಂದೂಡಿದೆ.

ಟಿವಿ ವಾಹಿನಿಗಳು ತಮ್ಮ ಜಾಹೀರಾತು ಆದಾಯ ಹೆಚ್ಚಿಸಿಕೊಳ್ಳಲು ಟಿಆರ್ ಪಿ ಸಂಖ್ಯೆಯನ್ನು ಅಡ್ಡದಾರಿಯಲ್ಲಿ ಹೆಚ್ಚಿಸಿಕೊಳ್ಳುತ್ತಿವೆ ಎಂದು ಬಾರ್ಕ್ ದೂರು ನೀಡಿತ್ತು. ಈ ಆಧಾರದಲ್ಲಿ ತನಿಖೆ ನಡೆಸಿರುವ ಪೊಲೀಸರು, ಟಿಆರ್ ಪಿ ಹಗರಣವನ್ನು ಪತ್ತೆ ಹಚ್ಚಿದ್ದಾರೆ.   

Join Whatsapp
Exit mobile version