ಮೂರು ತಿಂಗಳಿಗೆ ಟಿ.ಆರ್.ಪಿ ನಿಲ್ಲಿಸಿದ ರೇಟಿಂಗ್ ಏಜೆನ್ಸಿ

Prasthutha|

ಹೊಸದಿಲ್ಲಿ: ಮೂರು ಟಿ.ವಿ ಚಾನೆಲ್ ಗಳು ವೀಕ್ಷಕತ್ವ ರೇಟಿಂಗ್ ನಲ್ಲಿ ಮೋಸ ಮಾಡಿದ ಆರೋಪಗಳು ಸುದ್ದಿಯಾಗಿರುವ ಬೆನ್ನಿಗೆ ದೂರದರ್ಶನ ರೇಟಿಂಗ್ ಏಜೆನ್ಸಿ ಬಾರ್ಕ್ (Broadcast Audience Research Council) ಮುಂದಿನ ಮೂರು ತಿಂಗಳಿಗೆ ಸುದ್ದಿ ಚಾನೆಲ್ ಗಳಿಗೆ ನೀಡುವ ವಾರದ ರೇಟಿಂಗ್ ಗಳನ್ನು ನಿಲ್ಲಿಸಲು ನಿರ್ಣಯಿಸಿದೆ. ಪ್ರಸ್ತುತ ಇರುವ ರೇಟಿಂಗ್ ಗುಣಮಟ್ಟವನ್ನು ವೃದ್ಧಿಸಲು ಮತ್ತು ಪರಿಷ್ಕರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಾರ್ಕ್ ಹೇಳಿದೆ.

ಎಲ್ಲಾ ಇಂಗ್ಲಿಷ್, ಹಿಂದಿ, ಪ್ರಾದೇಶಿಕ ಮತ್ತು ವಾಣಿಜ್ಯ ನ್ಯೂಸ್ ಚಾನೆಲ್ ಗಳಿಗೆ ಈ ರೇಟಿಂಗ್ ಅಮಾನತು ಅನ್ವಯಿಸಲಿದೆ.

- Advertisement -

ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕೆಂಬ ರಿಪಬ್ಲಿಕ್ ಟಿವಿ ಕೋರಿಕೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ದಿನವೇ  ಈ ಪ್ರಮುಖ ನಿರ್ಣಯವು ಹೊರಬಿದ್ದಿದೆ.

ರೇಟಿಂಗನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಬಾರ್ಕ್ ಕ್ರಮವನ್ನು ಭಾರತದ ಸುದ್ದಿ ಪ್ರಸಾರಕರ ಅಸೋಸಿಯೇಶನ್ ಸ್ವಾಗತಿಸಿದೆ.

- Advertisement -