Home ಟಾಪ್ ಸುದ್ದಿಗಳು ತ್ರಿಪುರಾ ಹಿಂಸಾಚಾರ: ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾದ ಹೈಕೋರ್ಟ್

ತ್ರಿಪುರಾ ಹಿಂಸಾಚಾರ: ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾದ ಹೈಕೋರ್ಟ್

ತ್ರಿಪುರಾ ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಅಗರ್ತಲಾ: ತ್ರಿಪುರಾದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ ಪ್ರಕರಣದ ಕುರಿತು ತ್ರಿಪುರಾ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ತ್ರಿಪುರಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರ ದುಷ್ಕರ್ಮಿಗಳ ತಂಡ ವ್ಯಾಪಕ ಹಿಂಸಾಚಾರವನ್ನು ನಡೆಸಿ ಅಪಾರ ಪ್ರಮಾಣದಲ್ಲಿ ಪ್ರಾಣ ಹಾನಿ, ನಾಶ ನಷ್ಟ ತಂದೊಡ್ಡಿತ್ತು.

ಈ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಐಪಿಸಿ 73/ 2021 US 148, 149, 427, 354 ಮತ್ತು 74/2021 US 325, 352, 506, 34 ಸೆಕ್ಷನ್ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ವಿಚಾರಣೆಗೆ ಮುಂದಾಗಿದೆ.

ಮಾತ್ರವಲ್ಲ ಈ ಸಂಬಂಧ ಪ್ರತಿಕ್ರಿಯಿಸುವಂತೆ ಕೋರಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Join Whatsapp
Exit mobile version