ಗುವಾಹಟಿ: ಅಸ್ಸಾಂ ನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 200 ರುಪಾಯಿ ಆದರೆ ದ್ವಿಚಕ್ರ ವಾಹನದಲ್ಲಿ ತ್ರಿಪಲ್ ರೈಡ್ಸ್ ಗೆ ಅವಕಾಶ ನೀಡಲಾಗುವುದೆಂದು ಅಸ್ಸಾಂ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿಕಾ ಇಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ.
ಪೆಟ್ರೋಲ್ ಗೆ 200 ರುಪಾಯಿ ಆದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿಗೆ ಅವಕಾಶ ನೀಡಲಾಗುವುದು. ಈ ಸಂದರ್ಭದಲ್ಲಿ ಸರ್ಕಾರದ ಅನುಮತಿ ಕಡ್ಡಾಯ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.
ಅಸ್ಸಾಂ ನ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 200 ರುಪಾಯಿ ಆದರೆ ದ್ವಿಚಕ್ರ ವಾಹನದಲ್ಲಿ ತ್ರಿಪಲ್ ರೈಡ್ಸ್ ಗೆ ಅವಕಾಶ ನೀಡಲಾಗುವುದೆಂದು ಹೇಳಿದ್ದಾರೆ.
ಮಾಜಿ ಸಚಿವರಾಗಿದ್ದ ಭಾಬೇಶ್ ಕಲಿಕಾ ಅವರು ಪ್ರಸಕ್ತ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.