ಲಖನೌ: ತ್ರಿವಳಿ ತಲಾಖ್ ಸಂತ್ರಸ್ತೆ ಹಾಗೂ ಇತ್ತಿಹಾದ್-ಎ-ಮಿತಾತ್ ಮಂಡಳಿಯ ಮುಖ್ಯಸ್ಥ ಮೌಲಾನಾ ತೌಖೀರ್ ರಾಜಾ ಖಾನ್ ರ ಸೊಸೆ ನಿದಾ ಖಾನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸೇರ್ಪಡೆ ಬಳಿಕ ಮಾತನಾಡಿದ ಅವರು, ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ತಳೆದಿರುವ ನಿಲುವು ನಾನು ಪಕ್ಷವನ್ನು ಬೆಂಬಲಿಸಲು ಮುಖ್ಯ ಕಾರಣ. ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ಸರ್ಕಾರ ತಳೆದಿರುವ ನಿಲುವವನ್ನೂ ಚುನಾವಣೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಪಕ್ಷದ ಚುನಾವಣಾ ಘೋಷಣೆಯನ್ನು ಆಕ್ಷೇಪಿಸಿರುವ ಅವರು, ‘ಕಾಂಗ್ರೆಸ್ ಪಕ್ಷವು ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ (ನಾವು ಹುಡುಗಿಯರು, ಹೋರಾಡಬಲ್ಲೆವು) ಎಂಬ ಘೋಷಣೆ ಮೊಳಗಿಸಿದೆ. ಆದರೆ ಮಹಿಳೆಯರ ರಕ್ಷಣೆಗಾಗಿ ಯಾವುದೇ ಕೆಲಸ ಮಾಡಿಲ್ಲ. ಮಹಿಳಾ ಸ್ವಾವಲಂಬನೆ ಮತ್ತು ಸುರಕ್ಷೆ ಬಗ್ಗೆ ಬಿಜೆಪಿಯು ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಿದರು.