ನಾಗಪುರದ ಆರೆಸ್ಸೆಸ್ ಮುಖ್ಯಕಚೇರಿಯಲ್ಲೂ ಹಾರಿದ ತ್ರಿವರ್ಣ ಧ್ವಜ

Prasthutha|

ಮಹಾರಾಷ್ಟ್ರ: ಇಲ್ಲಿನ ನಾಗಪುರದಲ್ಲಿರುವ ಆರೆಸ್ಸೆಸ್ ಮುಖ್ಯ ಕಚೇರಿಯಲ್ಲೂ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಷ್ಟ್ರಧ್ವಜ ಹಾರಿಸಲಾಯಿತು.

ಕಚೇರಿಯ ಮೇಲ್ಭಾಗದಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಹಿತ ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದರು.

- Advertisement -

ಸ್ವಾತಂತ್ರ್ಯಾನಂತರ ಅದೆಷ್ಟೋ ವರ್ಷಗಳ ಬಳಿಕ ಆರೆಸ್ಸೆಸ್ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿತ್ತು. ರಾಷ್ಟ್ರಧ್ವಜದ ಬಗ್ಗೆ ಆರೆಸ್ಸೆಸ್‌ನ ನಿಲುವು ತಿಳಿದವರು ‘ಹರ್ ಘರ್ ತಿರಂಗಾ’ ಅಭಿಯಾನ ಮೊದಲು ಅನುಷ್ಠಾನಕ್ಕೆ ತರಬೇಕಿರುವುದು ಆರೆಸ್ಸೆಸ್ ಎಂದಿದ್ದರು. ಅಲ್ಲದೇ ರಾಷ್ಟ್ರ ಧ್ವಜವನ್ನು ಪ್ರೊಫೈಲ್‌ನಲ್ಲಿ ಬಳಸಲು ಸಾಮಾಜಿಕ ಜಾಲತಾಣದಲ್ಲಿ ಜನರು ಆರೆಸ್ಸೆಸ್‌ಗೆ ಒತ್ತಡ ಹೇರಿದ್ದರು.

ಈ ಎಲ್ಲಾ ಬೆಳವಣಿಗೆಯ ಬಳಿಕ ಆರೆಸ್ಸೆಸ್ ತನ್ನ ಅಧಿಕೃತ ಪೇಜ್‌ನ ಪ್ರೊಫೈಲ್ ಫೋಟೋವನ್ನು ರಾಷ್ಟ್ರ ಧ್ವಜಕ್ಕೆ ಬದಲಾಯಿಸಿದ್ದು, ಇಂದು ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನೂ ಹಾರಿಸಿದೆ.

- Advertisement -