Home ರಾಜ್ಯ ಯೋಧರ ಸ್ಮಾರಕಕ್ಕೆ ಗೌರವ ನಮನ

ಯೋಧರ ಸ್ಮಾರಕಕ್ಕೆ ಗೌರವ ನಮನ

ವೀರಾಜಪೇಟೆ: ಇಲ್ಲಿನ ತಾಲ್ಲೂಕು  ಮಿನಿ ವಿಧಾನ ಸೌಧದ ಬಳಿಯಿರುವ ‘ಅಮರ ಜವಾನ ಸ್ಮಾರಕ’ಕ್ಕೆ ಪುಷ್ಪಗುಚ್ಛ ಅರ್ಪಿಸಿ ದೇಶ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ  ಗೌರವ ಹಾಗೂ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.

ನಂ.434ನೇ ಕೊಡಗು ಮಾಜಿ ಸೈನಿಕರ ಸಹಕಾರ ಸಂಘ,ನಿಯಮಿತ,ವೀರಾಜಪೇಟೆ ಯ 2020-2021ನೇ ಸಾಲಿನ ವಾರ್ಷಿಕ ಮಹಾಸಭೆಗೆ ಮುನ್ನ ಸಂಘದ ಅಧ್ಯಕ್ಷರಾದ ಚೇಂದ್ರಿಮಾಡ ಕೆ.ನಂಜಪ್ಪ ನವರ ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ಕರ್ನಲ್ (ನಿ)ವಾಟೇರಿರ ಪಿ.ಸದಾಶಿವ,ವಿರಾಜಪೇಟೆಯ ಕರ್ನಲ್ ಲಕ್ಷ್ಮಿನಾರಾಯಣ, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ,ವಿರಾಜಪೇಟೆ ಉಪ ಅಧೀಕ್ಷಕ ಜೈಕುಮಾರ್ ಪಿ.ಪಿ,ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಕಿರಣ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷಿಣಿ ಟಿ.ಆರ್.ಸುಶ್ಮಿತಾ,ಆಟ್ಟೊ ಚಾಲಕರ ಸಂಘ,ಕಾವೇರಿ ಲಘು ವಾಹನ ಮಾಲಿಕ ಚಾಲಕರ ಸಂಘದವರು ಪುಷ್ಪ ನಮನ ಅರ್ಪಿಸಿದರು.

ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ತುಕಡಿಯವರಿಂದ ಕುಶಾಲ ತೋಪು ಹರಿಸಿ ‘ಉಲ್ಟಿ ಸಸ್ತ್ರ್’ ನೋಂದಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಹಕಾರ ಸಂಘದ ಸದಸ್ಯರು,ಮಾಜಿ ಯೋಧರು,ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.

Join Whatsapp
Exit mobile version