Home ಟಾಪ್ ಸುದ್ದಿಗಳು ಪ್ರವಾಸಕ್ಕೆ ಹೊರಟಿದ್ದ ಬುಡಕಟ್ಟು ಶಿಕ್ಷಕರ ಮೇಲೆ ಸಂಘಪರಿವಾರದಿಂದ ಹಲ್ಲೆ

ಪ್ರವಾಸಕ್ಕೆ ಹೊರಟಿದ್ದ ಬುಡಕಟ್ಟು ಶಿಕ್ಷಕರ ಮೇಲೆ ಸಂಘಪರಿವಾರದಿಂದ ಹಲ್ಲೆ

ಬೆಳಗಾವಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವಾಸ ಬುಡಕಟ್ಟು ಜನಾಂಗದ ಶಿಕ್ಷಕರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.


ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರದ ಆದಿವಾಸಿಗಳು ಶಿರಪುರದ ವಿಶ್ವ ಮಂಡಲ ಸೇವಾಶ್ರಮದ ಪಾದ್ರಿ ಕಾನ್’ಸ್ಟಿ ಎಂಬವರ ನೇತೃತ್ವದಲ್ಲಿ ಬಂದ ಬುಡಕಟ್ಟು ಶಿಕ್ಷಕರು ಮತ್ತು ಪಾದ್ರಿಯ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯಿಂದ ಪಾದ್ರಿ ಮತ್ತು ಕೆಲವು ಶಿಕ್ಷಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರದ ಆದಿವಾಸಿಗಳು ಶಿರಪುರದ ವಿಶ್ವ ಮಂಡಲ ಸೇವಾಶ್ರಮದ ಪಾದ್ರಿ ಕಾನ್’ಸ್ಟಿ ಎಂಬವರ ನೇತೃತ್ವದಲ್ಲಿ ಸೋಮವಾರ ಗೋವಾಗೆ ಪ್ರಯಾಣ ಬೆಳೆಸಿದ್ದರು. ಮನ್ಮಾಡ್ ನಿಲ್ದಾಣದಲ್ಲಿ ರೈಲು ಹತ್ತಿದ ಅವರು ರಾತ್ರಿ ಸಾಂಗ್ಲಿಗೆ ಬಂದಿದ್ದರು. ಇವರನ್ನು ನೋಡಿದ ಸಂಘಪರಿವಾರದ ಕಾರ್ಯಕರ್ತರು, ಇವರು ಹಿಂದೂಗಳು, ಇವರನ್ನು ಮತಾಂತರ ಮಾಡಲು ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಈ ತಂಡದ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಆತಂಕಗೊಂಡ ಪಾದ್ರಿ ಹಾಗೂ ಬುಡಕಟ್ಟು ಜನರು ಬೆಳಗಾವಿ ಮಾರ್ಗವಾಗಿ ಗೋವಾಗೆ ಹೊರಟಿದ್ದರು. ಬೆಳಗಾವಿಯಲ್ಲೂ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸರು ಅವರೆಲ್ಲರನ್ನೂ ವಾಹನ ಸಮೇತ ಹಿಂದಕ್ಕೆ ಕಳುಹಿಸಿದ್ದಾರೆ. ಭದ್ರತೆ ಒದಗಿಸುವ ಬದಲು ಪೊಲೀಸರು ಅವರನ್ನು ಹಿಂದಕ್ಕೆ ಕಳಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದರಿಂದ ಕೆಲವು ಆದಿವಾಸಿಗಳು ಮತ್ತು ಪಾದ್ರಿ ಗಾಯಗೊಂಡಿದ್ದಾರೆ. ಸಾಂಗ್ಲಿಯಲ್ಲಿ ನಡೆದ ಘಟನೆಯ ಬಗ್ಗೆ ಪಾದ್ರಿ ಕಾನ್ಸ್ಟಿ ಅವರು ಅವರು ಬೆಳಗಾವಿಯ ಕ್ರೈಸ್ತ ಧರ್ಮಗುರುಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಅವರು ಇಲ್ಲಿನ ಕ್ಯಾಂಪ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದರು.


ನಾವು ಎನ್’ಜಿಒ ನಡೆಸುತ್ತಿದ್ದು, ಇದರಡಿ ಶಾಲೆಗಳು ಕಾರ್ಯಾಚರಿಸುತ್ತಿವೆ. ಇಲ್ಲಿ ಬುಡಕಟ್ಟು ಜನಾಂಗದವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ಬುಡಕಟ್ಟು ಜನಾಂಗದ ಶಿಕ್ಷಕರನ್ನು ಪ್ರವಾಸಕ್ಕೆ ಕರೆದೊಯ್ಯುತ್ತೇವೆ. ಈ ಬಾರಿಯೂ ಗೋವಾಕ್ಕೆ ಪ್ರವಾಸಕ್ಕೆಂದು ಹೊರಟಿದ್ದಾಗ, ಸಂಘಪರಿವಾರದ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ದಾಳಿ ನಡೆಸಿದ್ದಾರೆ. ನಾವು ಯಾರನ್ನೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿಲ್ಲ. ಇವೆಲ್ಲವೂ ಸುಳ್ಳು ಆರೋಪ ಎಂದು ಪಾದ್ರಿ ಕಾನ್’ಸ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Join Whatsapp
Exit mobile version