Home ಕರಾವಳಿ ಅಕ್ಷರ ಸಂತ ಹರೇಕಳ ಹಾಜಬ್ಬರ ಮನೆಗೆ ವೃಕ್ಷಮಾತೆ ತುಳಸಿ ಗೌಡ ಭೇಟಿ

ಅಕ್ಷರ ಸಂತ ಹರೇಕಳ ಹಾಜಬ್ಬರ ಮನೆಗೆ ವೃಕ್ಷಮಾತೆ ತುಳಸಿ ಗೌಡ ಭೇಟಿ

ಮಂಗಳೂರು: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರ ಮನೆಗೆ ಇಂದು  ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಭೇಟಿ ನೀಡಿದ್ದಾರೆ.

ಮಂಗಳೂರು ಹೊರವಲಯದ ಹರೇಕಳದ ಹಾಜಬ್ಬರ ಮನೆಗೆ ಭೇಟಿ ನೀಡಿದ ತುಳಸಿ ಗೌಡ ಅವರು ಹರೇಕಳ ಹಾಜಬ್ಬರು ನಡೆಸುತ್ತಿರುವ ಶಾಲೆಗೂ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದಿದ್ದಾರೆ. ಇದೇ ವೇಳೆ ಇಬ್ಬರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿದರು.

ತುಳಸಿ ಗೌಡ ಅವರು ಪದ್ಮಶ್ರೀ ಪಡೆದು ದೆಹಲಿಯಿಂದ ಬರುವಾಗಲೇ ಹಾಜಬ್ಬ ತೆರೆದ ಶಾಲೆ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ಕುಟುಂಬಸ್ಥರು ಇಂದು ಅವರನ್ನು ಹಾಜಬ್ಬರ ಮನೆಗೆ ಕರೆತಂದಿದ್ದಾರೆ. ಜೊತೆಗೆ ಹಾಜಬ್ಬರ ಪಿ.ಯು ಕಾಲೇಜು ತೆರೆಯುವ ಕನಸಿಗೆ ಆರ್ಥಿಕ ಸಹಾಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version