Home ಟಾಪ್ ಸುದ್ದಿಗಳು 21 IAS ಅಧಿಕಾರಿಗಳ ವರ್ಗಾವಣೆ

21 IAS ಅಧಿಕಾರಿಗಳ ವರ್ಗಾವಣೆ

►ಮುಡಾ ಹಗರಣ ಬಯಲಿಗೆಳೆದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ವರ್ಗಾವಣೆ


ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾಗಿರುವ ಹಗರಣವನ್ನು ಬಯಲಿಗೆಳೆದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಮುಡಾ ಹಗರಣದ ಬಗ್ಗೆ ಡಿಸಿ ಕೆ.ವಿ ರಾಜೇಂದ್ರ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದಿದ್ದರು. ಮುಡಾದ 50:50 ಸೈಟು ವಿಷಯದಲ್ಲಿ ಸರ್ಕಾರದ ಕಾರ್ಯದರ್ಶಿಗೂ ಪತ್ರ ಬರೆದಿದ್ದರು. ಡಿಸಿ ಪತ್ರ ಬೆಳಕಿಗೆ ಬಂದ ಮರುದಿನವೇ ವರ್ಗಾವಣೆಯಾಗಿದೆ. ಕೆವಿ ರಾಜೇಂದ್ರ ಸೇರಿದಂತೆ ಒಟ್ಟು 21 ಐಎಎಸ್​ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

  1. ಕೆ.ವಿ ರಾಜೇಂದ್ರ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
  2. ಲಕ್ಷ್ಮೀಕಾಂತ್ ರೆಡ್ಡಿ: ಜಿಲ್ಲಾಧಿಕಾರಿ, ಮೈಸೂರು
  3. ಡಾ. ರಾಮ್ ಪ್ರಸಾದ್ ಮನೋಹರ್ ವಿ: ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  4. ನಿತೇಶ್ ಪಾಟೀಲ್: ನಿರ್ದೇಶಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಇಲಾಖೆ
  5. ಡಾ. ಅರುಂಧತಿ ಚಂದ್ರಶೇಖರ್: ಆಯುಕ್ತರು, ಪಂಚಾಯತ್ ರಾಜ್ ಇಲಾಖೆ
  6. ಜ್ಯೋತಿ ಕೆ: ಆಯುಕ್ತರು, ಜವಳಿ ಅಭಿವೃದ್ಧಿ ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ
  7. ಶ್ರೀಧರ ಸಿಎನ್: ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  8. ಚಂದ್ರಶೇಖರ ನಾಯಕ ಎಲ್: ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ
  9. ವಿಜಯಮಹಾಂತೇಶ ಬಿ ದಾನಮ್ಮನವರ್: ಜಿಲ್ಲಾಧಿಕಾರಿ, ಹಾವೇರಿ
  10. ಗೋವಿಂದ ರೆಡ್ಡಿ: ಜಿಲ್ಲಾಧಿಕಾರಿ, ಗದಗ
  11. ರಘುನಂದನ್ ಮೂರ್ತಿ: ಆಯುಕ್ತರು, ಖಜಾನೆಗಳು ಮತ್ತು ಲೆಕ್ಕಪತ್ರ ಇಲಾಖೆ
  12. ಡಾ. ಗಂಗಾಧರಸ್ವಾಮಿ ಜಿ ಎಂ: ಜಿಲ್ಲಾಧಿಕಾರಿ, ದಾವಣಗೆರೆ
  13. ನಿತೀಶ್ ಕೆ: ಜಿಲ್ಲಾಧಿಕಾರಿ, ರಾಯಚೂರು
  14. ಮೊಹಮ್ಮದ್ ರೋಶನ್: ಜಿಲ್ಲಾಧಿಕಾರಿ, ಬೆಳಗಾವಿ
  15. ಶಿಲ್ಪಾ ಶರ್ಮಾ: ಜಿಲ್ಲಾಧಿಕಾರಿ, ಬೀದರ್
  16. ಡಾ ದಿಲೀಶ್ ಸಸಿ: ಕೇಂದ್ರ ಸಿಇಒ, ಇ-ಆಡಳಿತ
  17. ಲೋಖಂಡೆ ಸ್ನೇಹಲ್ ಸುಧಾಕರ್: ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್
  18. ಶ್ರೀರೂಪ: ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
  19. ಗಿಟ್ಟೆ ಮಾಧವ್ ವಿಠ್ಠಲ್ ರಾವ್: ಪ್ರಧಾನ ವ್ಯವಸ್ಥಾಪಕರು, ಪುನರ್ವಸತಿ ಕೇಂದ್ರ ಬಾಗಲಕೋಟೆ
  20. ಹೇಮಂತ್ ಎನ್: ಸಿಇಒ, ಜಿಲ್ಲಾ ಪಂಚಾಯತ್, ಶಿವಮೊಗ್ಗ
  21. ಮೊಹಮ್ಮದ್ ಅಲಿ ಅಕ್ರಮ್ ಶಾ: ಮುಖ್ಯ ಕಾರ್ಯನಿರ್ವಾಹಕ, ಜಿಲ್ಲಾ ಪಂಚಾಯತ್, ವಿಜಯನಗರ
Join Whatsapp
Exit mobile version