ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಮೊದಲ ಅಗ್ನಿವೀರರ ತರಬೇತಿ 2022 ರ ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ಸಕ್ರಿಯ ಸೇವೆ 2023 ರ ಮಧ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮುಂದಿನ ಎರಡು ದಿನಗಳಲ್ಲಿ, ಅಧಿಕೃತ ವೆಬ್ಸೈಟ್ ನಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಅದರ ನಂತರ ನಮ್ಮ ಸೇನಾ ನೇಮಕಾತಿ ಸಂಸ್ಥೆಗಳು ನೋಂದಣಿ ಮತ್ತು ವಿವರವಾದ ವೇಳಾಪಟ್ಟಿಯನ್ನು ಘೋಷಿಸುತ್ತದೆ ಎಂದು ಹೇಳಿದ್ದಾರೆ.