Home ಟಾಪ್ ಸುದ್ದಿಗಳು ರೈಲಿನಲ್ಲಿ ಗುಂಡಿನ ದಾಳಿ: ಕಾನ್ ಸ್ಟೆಬಲ್ ಚೇತನ್ ಚೌಧರಿ ಸೇವೆಯಿಂದ ವಜಾ

ರೈಲಿನಲ್ಲಿ ಗುಂಡಿನ ದಾಳಿ: ಕಾನ್ ಸ್ಟೆಬಲ್ ಚೇತನ್ ಚೌಧರಿ ಸೇವೆಯಿಂದ ವಜಾ

ಮುಂಬೈ: ಕಳೆದ ತಿಂಗಳು ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ರಕ್ಷಣಾ ಪಡೆಯ (ಆರ್ ಪಿಎಫ್) ಕಾನ್ ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.


ಆರ್ ಪಿಎಫ್ ವಿಭಾಗೀಯ ಭದ್ರತಾ ಆಯುಕ್ತರು, ಚೌಧರಿ ಅವರನ್ನು ವಜಾಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


ರೈಲಿನ ಬೇರೆ ಬೇರೆ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಟಿಕರಾಮ್ ಮೀನಾ ಮೊಹಮ್ಮದ್ ಹುಸೇನ್ ಭಾನ್ಪುರವಾಲಾ, ಸಯ್ಯದ್ ಸಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಲ್ಲದೆ ವಜಾಗೊಂಡಿರುವ ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಸಿಂಗ್‌ ಚೌಧರಿ ಈ ಹಿಂದೆ ಮುಸ್ಲಿಂ ವ್ಯಕ್ತಿಗೆ ವಿನಾಕಾರಣ ಉಪಟಳ ನೀಡಿದ್ದ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

Join Whatsapp
Exit mobile version