ಲಖಿಂಪುರ್ ಘಟನೆ ವಿರೋಧಿಸಿ ರೈತರಿಂದ ದೇಶಾದ್ಯಂತ ರೈಲು ರೋಕೋ| ಹಳಿ ಮೇಲೆ ಕುಳಿತ ರೈತರು!

Prasthutha|

ಲಕ್ನೋ: ಉತ್ತರ ಪ್ರದೇಶ ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದ್ದು, ರೈತರು ದೇಶಾದ್ಯಂತ ರೈಲು ರೋಕೋ ನಡೆಸಿದ್ದಾರೆ.

- Advertisement -

ಲಖಿಂಪುರ್ ಖೇರಿಯ ರೈತರ ಹತ್ಯೆ ಪ್ರಕರಣದಲ್ಲಿ ಪುತ್ರ ಆಶಿಶ್ ಮಿಶ್ರಾ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ರೈತರು ಒತ್ತಾಯಿಸುತ್ತಿದ್ದು, ರಾಷ್ಟ್ರವ್ಯಾಪಿ ರೈಲನ್ನು ತಡೆದು ಹಳಿ ಮೇಲೆ ಕುಳಿತಿದ್ದಾರೆ. ಲಕ್ನೋದಲ್ಲಿ ಪೊಲೀಸರು ರೈತ ಸಂಘದ ನಾಯಕರ ಮನೆಗಳನ್ನು ಸುತ್ತುವರಿದಿದ್ದಾರೆ.

ಹಲವು ಪ್ರತಿಭಟನೆಗಳ ನಂತರ ಆಶಿಶ್ ಮಿಶ್ರಾ ಬಂಧನವಾಗಿದೆ. ಆದರೆ ಅಜಯ್ ಮಿಶ್ರಾ ಕೇಂದ್ರ ಸಚಿವ ಸಂಪುಟದಲ್ಲಿ ಉಳಿದರೆ ರೈತರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ.

Join Whatsapp