Home ಟಾಪ್ ಸುದ್ದಿಗಳು ಯುಪಿಯಲ್ಲಿ ಭೀಕರ ರಸ್ತೆ ಅಫಘಾತಕ್ಕೆ ಕನಿಷ್ಠ 18 ಬಲಿ

ಯುಪಿಯಲ್ಲಿ ಭೀಕರ ರಸ್ತೆ ಅಫಘಾತಕ್ಕೆ ಕನಿಷ್ಠ 18 ಬಲಿ

ಕಾನ್ಪುರ, ಜುಲೈ 28: ಉತ್ತರಪ್ರದೇಶದ ಬರಾಬಂಕಿಯಲ್ಲಿ ಮಂಗಳವಾರ ತಡರಾತ್ರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 18 ಪ್ರಯಾಣಿಕರು ಸಾವನ್ನಪ್ಪಿ ಇತರ 19 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಲಖನೌ-ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಟ್ರಕ್ ಗೆ ಡಬಲ್ ಡೆಕ್ಕರ್ ಬಸ್ಸೊಂದು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.


ಗಾಯಗೊಂಡ ಪ್ರಯಾಣಿಕರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಬರಾಬಂಕಿ ನಡೆದ ಭೀಕರ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಣೆ ಮಾಡಲಾಗಿದೆ.


ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ನೊ ವಲಯದ ಎಡಿಜಿ ಸತ್ಯ ನಾರಾಯಣ್ ಸಬತ್, ಬರಾಬಂಕಿ ಜಿಲ್ಲೆಯ ರಾಮ್ ಸನೆಹಿ ಘಾಟ್ ಬಳಿಯ ಹೆದ್ದಾರಿಯಲ್ಲಿ ನಡೆದ ಈ ದುರಂತದಲ್ಲಿ 18 ಜನರು ಸಾವನ್ನಪ್ಪಿರುವುದು ಖಚಿತವಾಗಿದೆ. ಅನೇಕ ಮಂದಿ ಬಸ್ಸಿನ ಕೆಳಗಡೆ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಬಸ್ಸಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಬಿಹಾರದ ಮೂಲದವರಾಗಿದ್ದಾರೆ. ಈ ಎಲ್ಲಾ ಪ್ರಯಾಣಿಕರು ಪಂಜಾಬ್ ಮತ್ತು ಹರಿಯಾಣದಿಂದ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

Join Whatsapp
Exit mobile version