Home ಟಾಪ್ ಸುದ್ದಿಗಳು ಟ್ರಾಫಿಕ್ ಜಾಮ್ ಅವಾಂತರ; ಕಾರು‌ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ತೆರಳಿ ರೋಗಿಯ ಜೀವ ಉಳಿಸಿದ ವೈದ್ಯ

ಟ್ರಾಫಿಕ್ ಜಾಮ್ ಅವಾಂತರ; ಕಾರು‌ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ತೆರಳಿ ರೋಗಿಯ ಜೀವ ಉಳಿಸಿದ ವೈದ್ಯ

ಬೆಂಗಳೂರು: ವಿಪರೀತ ಮಳೆಯಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ವೈದ್ಯರೊಬ್ಬರು, ರೋಗಿಯ ಜೀವ ಉಳಿಸಲು ಕಾರಿನಿಂದ ಇಳಿದು ಆಸ್ಪತ್ರೆಯವರೆಗೂ 3 ಕಿ.ಮೀ.ವರೆಗೆ ಓಡಿ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದ ಪ್ರಶಂಸನೀಯ ಘಟನೆ ಸರ್ಜಾಪುರದಲ್ಲಿ ನಡೆದಿದೆ.

ಸರ್ಜಾಪುರದ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಗೋವಿಂದ ನಂದಕುಮಾರ್ ಅವರು ರೋಗಿಯೊಬ್ಬರಿಗೆ ಲ್ಯಾಪ್ರೋ ಸ್ಕೋಪಿಕ್ ಗ್ಲಾಡ್ ಬ್ಲಡರ್ ಚಿಕಿತ್ಸೆ ಮಾಡಬೇಕಾಗಿತ್ತು. ಹಾಗಾಗಿ ಡಾ. ಗೋವಿಂದ ನಂದಕುಮಾರ್ ಕನ್ನಿಂಗ್ ಹ್ಯಾಮ್‍ನಿಂದ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದರು.  ಬೆಳ್ಳಗ್ಗೆ 10 ಗಂಟೆಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಆದರೆ ಸರ್ಜಾಪುರ- ಮಾರತ್ತಹಳ್ಳಿ ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್ ನಲ್ಲಿ ಕಾರು ಸಿಲುಕಿತ್ತು. ಪರಿಣಾಮ ಆಸ್ಪತ್ರೆ ತಲುಪಲು 1 ಗಂಟೆ ಸಮಯ ಬೇಕಾಗಿತ್ತು. ಹೀಗಾಗಿ ಕಾರನ್ನು ಆಸ್ಪತ್ರೆಗೆ ತರುವಂತೆ ಚಾಲಕನಿಗೆ ಹೇಳಿ ಆಸ್ಪತ್ರೆಯತ್ತ ಓಡಲಾರಂಭಿಸಿದ ಡಾ. ಗೋವಿಂದ ಕೆಲ ನಿಮಿಷಗಳಲ್ಲಿ ಆಸ್ಪತ್ರೆ ತಲುಪಿ ರೋಗಿಗೆ ಶಸ್ತ್ರಚಿಕಿತ್ಸೆ ‌ಮಾಡಿ‌ ಜೀವ ಉಳಿಸಿದ್ದಾರೆ.

ವೈದ್ಯ ರಸ್ತೆಯಲ್ಲಿ ಓಡುತ್ತಿದ್ದ ದೃಶ್ಯವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ‌ ಮಾಧ್ಯಮಗಳಲ್ಲಿ ವೈದ್ಯರ ಈ ಮಹತ್ಕಾರ್ಯಕ್ಕೆ  ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Join Whatsapp
Exit mobile version