Home ಟಾಪ್ ಸುದ್ದಿಗಳು ಹೊಗೆ ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸ್!

ಹೊಗೆ ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ಹಾಕಿದ ಟ್ರಾಫಿಕ್ ಪೊಲೀಸ್!

ತಿರುವನಂತಪುರ: ಟ್ರಾಫಿಕ್ ಪೊಲೀಸರು ಪ್ರಮಾಣಪತ್ರ ಅಗತ್ಯ ಇಲ್ಲದ ಎಲೆಕ್ಟ್ರಿಕ್ ವಾಹನದ ಸವಾರ ವಾಯು ಮಾಲಿನ್ಯ ಪ್ರಮಾಣಪತ್ರ ಕೊಟ್ಟಿಲ್ಲ ಎಂದು ದಂಡ ಹಾಕಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ. ಕೇರಳ ಟ್ರಾಫಿಕ್ ಪೊಲೀಸರ ಈ ಎಡವಟ್ಟನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಕೇರಳದ ಮಣಪ್ಪುರಂ ಜಿಲ್ಲೆಯ ನೀಲಾಂಚರಿಯಲ್ಲಿ ‘ಏಥರ್’ ಕಂಪನಿಯ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ತೆಗೆದುಕೊಂಡು ಹೋಗುತ್ತಿದ್ದಾಗ ತಡೆದು ಪರಿಶೀಲನೆ ನಡೆಸಿದ ಸ್ಥಳೀಯ ಟ್ರಾಫಿಕ್ ಪೊಲೀಸರು ಬಳಿಕ 250 ರೂ, ದಂಡ ವಿಧಿಸಿ ರಶೀದಿ ಕೊಟ್ಟಿದ್ದಾರೆ.

ಯುವಕ ಇದೇ ರಶೀದಿಯನ್ನು ಟ್ವಿಟರ್‌ನಲ್ಲಿ ಹಾಕಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ ‘ಸ್ವಾಮಿ, ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಕಡ್ಡಾಯ ಮಾಡಿರುವಿರಾ ಹೇಗೆ’ ಎಂದು ಪ್ರಶ್ನಿಸಿದ್ದಾನೆ.

ಪ್ರಮಾದ ಬೆಳಕಿಗೆ ಬಂದ ನಂತರ ಸ್ಪಷ್ಟನೆ ನೀಡಿರುವ ಪೊಲೀಸರು, ಇದು ಅಚಾತುರ್ಯದಿಂದ ಆಗಿರುವ ಘಟನೆ. ಅಸಲಿಗೆ ಯುವಕ ಡಿಎಲ್ ಪ್ರಸ್ತುತಪಡಿಸದಿದ್ದಕ್ಕೆ ದಂಡ ವಿಧಿಸಲಾಗಿತ್ತು. ದಂಡ ನೀಡುವಾಗ ಮಷಿನ್‌ನಲ್ಲಿ ಆದ ಎಡವಟ್ಟಿನಿಂದ ಹೀಗೆ ಆಗಿದೆ ಎಂದಿದ್ದಾರೆ.

Join Whatsapp
Exit mobile version