Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ‘ಟೋಯಿಂಗ್’ ತಾತ್ಕಾಲಿಕ ಬಂದ್: ರವಿಕಾಂತೇಗೌಡ

ಬೆಂಗಳೂರಿನಲ್ಲಿ ‘ಟೋಯಿಂಗ್’ ತಾತ್ಕಾಲಿಕ ಬಂದ್: ರವಿಕಾಂತೇಗೌಡ

ಬೆಂಗಳೂರು:  ನಗರದಲ್ಲಿ ವಾಹನಗಳ ಟೋಯಿಂಗ್ ಮಾಡುವುದನ್ನೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು  ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

‘ಜನರ ವಿರೋಧ ವ್ಯಕ್ತವಾಗುತ್ತಿರುವುದರಿಂದ, ವಾಹನಗಳನ್ನು ಟೋಯಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಟೋಯಿಂಗ್ ‘ಟೈಗರ್’ ವಾಹನಗಳು ನಗರದಲ್ಲಿ ಸೋಮವಾರ ಎಲ್ಲಿಯೂ ಸಂಚರಿಸಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಟೋಯಿಂಗ್ ವ್ಯವಸ್ಥೆ ಸುಧಾರಣೆ ಹೇಗೆ ? ಹಾಗೂ ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕು’ ಎಂಬುದನ್ನು ತಿಳಿಸಲು ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರು ಸೋಮವಾರ ಸಭೆ ನಡೆಸಿದರು ಅಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

Join Whatsapp
Exit mobile version