ಚಂಡೀಗಢ: ಕಾಂಗ್ರೆಸ್ ತನ್ನ ಒಳಜಗಳಗಳಿಂದಾಗಿ ಮತ್ತೇ ತನ್ನ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಇಂದೂ ಪಂಜಾಬ್ ನಲ್ಲಿಯೂ ಐವರು ಪ್ರಮುಖ ನಾಯಕರು ಸಾಮೂಹಿಕವಾಗಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದು, ಬಿಜೆಪಿ ಸೇರಲು ಮುಂದಾಗಿದ್ದಾರೆ.
ಕಳೆದ ತಿಂಗಳು ಪಂಜಾಬ್ ನ ಮಾಜಿ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖರ್ ಅವರು ಬಿಜೆಪಿ ಸೇರಿದ ನಂತರ ಕಾಂಗ್ರೆಸ್ ನಿಂದ ಸಾಮೂಹಿಕ ವಲಸೆ ಪ್ರಾರಂಭವಾಗಿದೆ. ಪಂಜಾಬ್ ಸಂಪುಟದ ಮಾಜಿ ಸಚಿವರಾದ ಗುರುಪ್ರೀತ್ ಸಿಂಗ್ ಕಂಗಾರ್, ಬಲ್ಬೀರ್ ಸಿಂಗ್ ಸಿಧು, ರಾಜ್ ಕುಮಾರ್ ವೆರ್ಕಾ, ಸುಂದರ್ ಶಾಮ್ ಅರೋರಾ ಮತ್ತು ಮಾಜಿ ಶಾಸಕ ಕೇವಲ್ ಸಿಂಗ್ ಧಿಲ್ಲೋನ್ ಅವರಿಂದು ಬಿಜೆಪಿ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.