ಟೂಲ್‌ ಕಿಟ್‌ ಪ್ರಕರಣ | ದಿಶಾ ರವಿ ಜಾಮೀನು ಅರ್ಜಿ ಮಂಗಳವಾರಕ್ಕೆ ಮುಂದೂಡಿಕೆ

Prasthutha|

- Advertisement -

ಹೊಸದಿಲ್ಲಿ : ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13ರಂದು ದೆಹಲಿ ಪೊಲೀಸರು ಬಂಧಿಸಿದ್ದ ಪರಿಸರ ಹೋರಾಟಗಾರ್ತಿ ದಿಶಾ ರವಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮಂಗಳವಾರಕ್ಕೆ ತನ್ನ ಆದೇಶವನ್ನು ಮುಂದೂಡಿದೆ.

3 ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ಪಟಿಯಾಲ ಹೌಸ್ ಕೋರ್ಟ್ʼಗಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಜಾಮೀನು ಅರ್ಜಿಯ ತೀರ್ಪನ್ನು ಮಂಗಳವಾರ ಫೆಬ್ರವರಿ 23ಕ್ಕೆ ಮುಂದೂಡಿದ್ದಾರೆ.

- Advertisement -

ಇದೇ ವೇಳೆ  ‘ಟೂಲ್ ಕಿಟ್’ ಎಂದರೇನು? ಬೆಂಗಳೂರು ಯುವತಿಗೆ ಜಾಮೀನು ನೀಡುವುದನ್ನು ತಡೆಯುವ ಕಾನೂನು ಯಾವುದು ಎಂದು ನ್ಯಾಯಾಧೀಶರು ದೆಹಲಿ ಪೊಲೀಸರಿಗೆ ಪ್ರಶ್ನಿಸಿದ್ದಾರೆ. ಪ್ರಾಸಿಕ್ಯೂಶನ್ ಕಥೆ ಏನು? ದಿಶಾ ರವಿ ವಿರುದ್ಧದ ಆರೋಪಗಳು ಯಾವುವು? ಅವರ ವಿರುದ್ಧ ಸಾಕ್ಷ್ಯಗಳು ಯಾವುವು? ಎಂದು ನ್ಯಾಯಾಲಯವು ಮೂರು ಪ್ರಶ್ನೆಗಳನ್ನು ಮುಂದಿಟ್ಟಿದೆ ಎಂದು ವರದಿಯೊಂದು ತಿಳಿಸಿದೆ.

ದಿಶಾ ರವಿ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಿಲ್ಲಿ ಪೊಲೀಸರು, ಟೂಲ್ ಕಿಟ್ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲ್ಪಟ್ಟ ಏಕೈಕ ವ್ಯಕ್ತಿ ದಿಶಾ ರವಿ. ಖಲಿಸ್ತಾನ್ ಬೆಂಬಲಿತ ಸಂಸ್ಥೆ ಪೊಯೆಟಿಕ್ ಜಸ್ಟಿಸ್ ಫೌಂಡೇಶನ್(ಪಿಜೆಎಫ್)ನೊಂದಿಗೆ ಈಕೆ ನಿಕಟ ಸಂಪರ್ಕ ಹೊಂದಿದ್ದಾರೆ ಹಾಗೂ ದೇಶದ ಮತ್ತು ಸೈನ್ಯದ ಹೆಸರನ್ನು ಹಾಳು ಮಾಡುವ ಉದ್ದೇಶ ಹೊಂದಿದ್ದರು ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

Join Whatsapp