Home ಟಾಪ್ ಸುದ್ದಿಗಳು ಮಕ್ಕಳಿಗೆ ರಾಗಿ ಮಿಕ್ಸ್‌ ನೀಡುವ ಕಾರ್ಯಕ್ರಮಕ್ಕೆ ನಾಳೆ ಸಿಎಂ ಚಾಲನೆ

ಮಕ್ಕಳಿಗೆ ರಾಗಿ ಮಿಕ್ಸ್‌ ನೀಡುವ ಕಾರ್ಯಕ್ರಮಕ್ಕೆ ನಾಳೆ ಸಿಎಂ ಚಾಲನೆ

ಬೆಂಗಳೂರು: ಸರಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಾಗಿ ಮಿಕ್ಸ್‌ ನೀಡುವ ಕಾರ್ಯಕ್ರಮಕ್ಕೆ ಫೆ.22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರದಲ್ಲಿ ಮೂರು ದಿನ ಕ್ಷೀರಭಾಗ್ಯ ಯೋಜನೆಯ ಬಿಸಿ ಹಾಲಿನಲ್ಲಿ ಮಿಶ್ರಣ ಮಾಡಿ ಕುದಿಸಿ ರಾಗಿ ಹೆಲ್ತ್‌ ಮಿಕ್ಸ್‌ ಅನ್ನು ಮಕ್ಕಳಿಗೆ ನೀಡಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 52 ಅನಧಿಕೃತ ಶಾಲೆಗಳಿರುವುದು ದೃಢಪಟ್ಟಿದೆ. ಈ ಶಾಲೆಗಳಲ್ಲಿ ಓದುತ್ತಿರುವ ಸುಮಾರು 5 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗದಂತೆ ಅವರನ್ನು ಪಕ್ಕದ ಅಧಿಕೃತ ಶಾಲೆಗಳ ಜತೆ ಸಂಯೋಜನೆ ನಡೆಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

Join Whatsapp
Exit mobile version