ಮಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಇದರ ಬಂಟ್ವಾಳ ತಾಲ್ಲೂಕು ಘಟಕ ‘ಪತ್ತನಾಜೆ’ ಜಾನಪದ ಹಬ್ಬವನ್ನು ನಾಳೆ ಬೆಳಿಗ್ಗೆ 8.30ರಿಂದ ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಿದೆ.
ಪ್ರಧಾನ ಸಂಚಾಲಕ ಗೋಪಾಲ ಅಂಚನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದದ್ದು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಹಪ್ರಾಧ್ಯಾಪಕ ದಿವಾ ಕೊಕ್ಕಡ ಪತ್ತನಾಜೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಅಂದು ಬೆಳಿಗ್ಗೆ 10 ಗಂಟೆಗೆ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಿಸುವರು ಎಂದಿದ್ದಾರೆ.
ಶುದ್ಧ, ಸಾಂಪ್ರದಾಯಿಕ ಆಹಾರವನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಜಾನಪದ ಆಹಾರ ಮೇಳ, ಸಾಂಸ್ಕೃತಿಕ ಮೇಳ, ಜಾನಪದ ಕ್ರೀಡಾಕೂಟ, ಜಾನಪದ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್, , ಮೇಯರ್ ಸುಧೀರ್ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ ಪೂಜಾರಿ, ಪ್ರಮುಖರಾದ ಎ. ಸಿ. ಭಂಡಾರಿ, ರಘುನಾಥ ಸೋಮಯಾಜಿ, ಅರ್ಜುನ್ ಭಂಡಾರ್‌ಕಾರ್, ಡಿ. ಚಂದ್ರಹಾಸ ಶೆಟ್ಟಿ ರಂಗೋಲಿ, ಜಗನ್ನಾಥ ಚೌಟ ಬದಿಗುಡ್ಡೆ, ಸುಧಾಕರ ಆಚಾರ್ಯ, ಪಮ್ಮಿ ಕೊಡಿಯಾಲ್‌ಬೈಲ್ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.