ಗ್ರಾಹಕರಿಗೆ ಟೊಮೆಟೊ ಶಾಕ್ : 200ರ ಗಡಿಯತ್ತ ಕೆಂಪು ರಾಣಿ

Prasthutha|

ಬೆಂಗಳೂರು: ಗ್ರಾಹಕರಿಗೆ ಮತ್ತೆ ಟೊಮೆಟೊ ದರ ಏರಿಕೆ ಶಾಕ್ ಕೊಟ್ಟಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಟೊಮೆಟೊ ಬೆಲೆಯಂತೋ 200ರ ಗಡಿಯತ್ತ ಓಡುತ್ತಿದೆ. ಇಷ್ಟು ದಿನ 100 ರ ಆಸುಪಾಸಿನಲ್ಲಿ ಇದ್ದಂತಹ ಟೊಮೆಟೊ ದರ ಇದ್ದಕ್ಕಿಂದ್ದಂತೆ 140-160 ರೂಗೆ ಜಿಗಿದಿದೆ. ಮತ್ತೆ ಕೆಲವು ಕಡೆ 200 ರೂ. ಗಡಿ ತಲುಪಿದೆ.

- Advertisement -

ಮತ್ತೆ ಗಗನ ಕುಸುಮವಾದ ಟೊಮೆಟೊ

ಟೊಮೆಟೊ ಬಿತ್ತನೆ ಕಡಿಮೆಯಾಗಿದ್ದು ದರ ಏರಿಕೆಯಾಗಿದೆ. ಮೂರು ತಿಂಗಳಿನಿಂದ ಟೊಮೆಟೊ ಬೆಲೆ‌ ಕಡಿಮೆಯಾಗುತ್ತೆ ಅಂತ ಜನರು ಕಾಯ್ತಾ ಇದ್ರು. ಆದ್ರೆ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಕೆಜಿಗೆ 150 ರಿಂದ 160 ರೂಪಾಯಿಗೆ ತಲುಪಿದೆ. ಕಳೆದ ಒಂದು ವಾರದ ಹಿಂದೆ 80-90 ರೂ ಇತ್ತು. ಬಳಿಕ 100ರ ಗಡಿ ದಾಟಿತ್ತು. ಆದ್ರೆ ಈಗ 200ರೂ ಸಮೀಪಿಸುತ್ತಿದೆ. ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ಟೊಮೆಟೊ ದರ ಏರಿಕೆಯಾಗಿದೆ. ಟೊಮೆಟೊ ದರ ಏರಿದ್ದರಿಂದ ರೈತರು ಸಂತೋಷಗೊಂಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್​ನಲ್ಲಿ ಟೊಮೆಟೊಗೆ 140 ರೂಪಾಯಿ ಇದೆ.

- Advertisement -

ಇನ್ನು ಒಂದು ತಿಂಗಳು ಇದೇ ರೀತಿಯ ಬೆಲೆ ಇರುತ್ತೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಇರುವ ಹಿನ್ನೆಲೆ ಟೊಮೆಟೊ ಬೆಳೆ ನಾಶವಾಗಿದೆ. ಹೀಗಾಗಿ ಉತ್ತರ ಭಾರತದಿಂದ ಭಾರಿ ಬೇಡಿಕೆ ಇದೆ.‌ ಇದರ ಜೊತೆಗೆ ನಮ್ಮ ರಾಜ್ಯದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು ಟೊಮೆಟೊಗೆ ಎಲೆ ಕಾಯಿಲೆ ಸಹ ಬರುತ್ತಿದೆ. ಹೀಗಾಗಿ ಇದ್ದಂತಹ ಟೊಮೆಟೊ ಸ್ಟಾಕ್ ಕೂಡ ಖಾಲಿಯಾಗಿದ್ದು, ಇರುವ ಅಲ್ಪ ಟೊಮೆಟೊಗೆ ಹೆಚ್ಚಿನ ಹಣ ನಿಗದಿ ಮಾಡಿ ವ್ಯಾಪರಸ್ಥರು ವ್ಯಾಪಾರ ಮಾಡ್ತಿದ್ದಾರೆ. ಇನ್ನು ಒಂದು ತಿಂಗಳು ಇದೇ ಬೆಲೆ ಮುಂದುವರಿಯಲಿದೆ ಎನ್ನಲಾಗುತ್ತಿದೆ.

ಬೆಂಗಳೂರಿಗೆ ಕೋಲಾರ, ಚಿಕ್ಕಬಳ್ಳಾಪುರ,‌ ಮೈಸೂರು, ನಾಸಿಕ್, ಆಂಧ್ರ ಟೊಮೆಟೊ ಬರುತ್ತಿತ್ತು. ಇದೀಗ ಅಲ್ಲಿಂದ‌ ಬರುವುದು ಸಹ ಕಡಿಮೆಯಾಗಿದೆ.‌ ಅಲ್ಲದೇ ಎರಡು ವಾರ ನಿರಂತರವಾಗಿ ಮಳೆ ಬಂದ ಹಿನ್ನಲೆ ಟೊಮೆಟೊಗೆ ಎಲೆಕಾಯಿಲೆ ಬರುತ್ತಿದೆ.

Join Whatsapp