Home ಟಾಪ್ ಸುದ್ದಿಗಳು ತಾಲಿಬಾನ್ ನಿಂದ ‘ಟೋಲೋ ನ್ಯೂಸ್’ ಪತ್ರಕರ್ತನ ಹತ್ಯೆ ಎಂದ ಮಾಧ್ಯಮಗಳು : ನಾನು ಜೀವಂತವಿದ್ದೇನೆಂದ ಪತ್ರಕರ್ತ...

ತಾಲಿಬಾನ್ ನಿಂದ ‘ಟೋಲೋ ನ್ಯೂಸ್’ ಪತ್ರಕರ್ತನ ಹತ್ಯೆ ಎಂದ ಮಾಧ್ಯಮಗಳು : ನಾನು ಜೀವಂತವಿದ್ದೇನೆಂದ ಪತ್ರಕರ್ತ !

ಕಾಬೂಲ್ : ತಾಲಿಬಾನ್ ಬಂಡುಕೋರರು ನನ್ನನ್ನು ಕೊಂದು ಹಾಕಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳು ಪ್ರಕಟಿಸಿದ ಸುದ್ದಿ ಸುಳ್ಳು ಮತ್ತು ಕಪೋಲಕಲ್ಪಿತವಾಗಿದೆ. ಪ್ರಸಕ್ತ ನಾನು ಈಗಲೂ ಜೀವಂತವಿರುವುದಾಗಿ ಟೋಲೋ ನ್ಯೂಸ್ ನ ಪತ್ರಕರ್ತರಾದ ಝಿಯಾರ್ ಖಾನ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಪಾಶ್ಚಿಮಾತ್ಯ ಮಾಧ್ಯಮಗಳ ಪೂರ್ವಾಗ್ರಹ ಪೀಡಿತ ವರದಿಗಾರಿಕೆಗೆ ಇದು ಮತ್ತೊಂದು ಉದಾಹರಣೆಯಂತಿದೆ. ಮಾಧ್ಯಮಗಳು, ‘ಟೋಲೋ ನ್ಯೂಸ್’ ಪತ್ರಕರ್ತ ಝಿಯಾರ್ ಖಾನ್ ರನ್ನು ತಾಲಿಬಾನಿಗರು ಹತ್ಯೆ ಮಾಡಿದ್ದಾರೆಂದು ವರದಿ ಮಾಡಿತ್ತು.

https://twitter.com/ziaryaad/status/1430769985702535170

ಕಾಬೂಲ್ ನಗರದಲ್ಲಿ ವರದಿ ಮಾಡುತ್ತಿರುವಾಗ ತಾಲಿಬಾನ್ ಬಂಡುಕೋರರು ಶಸ್ತ್ರಸಜ್ಜಿತ ಲ್ಯಾಂಡ್ ಕ್ರೂಸರ್ ನಲ್ಲಿ ಆಗಮಿಸಿ ನನಗೆ ಗನ್ ನಿಂದ ಹೊಡೆದರು. ಮಾತ್ರವಲ್ಲದೆ ನನ್ನ ಬಳಿಯಿದ್ದ ಕ್ಯಾಮರಾ, ತಾಂತ್ರಿಕ ಉಪಕರಣಗಳು ಮತ್ತು ಮೊಬೈಲ್ ಫೋನನ್ನು ತಾಲಿಬಾನಿಗಳು ತಮ್ಮೊಡನೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ ನನ್ನ ಮೇಲೆ ದಾಳಿ ಮಾಡಿ ಅವರು ಯಾಕೆ ಆ ರೀತಿ ವರ್ತಿಸಿದರು ಎಂದು ನನಗೆ ತಿಳಿದಿಲ್ಲ. ಈ ಸಮಸ್ಯೆಯನ್ನು ತಾಲಿಬಾನ್ ನಾಯಕರಿಗೆ ತಿಳಿಸಿದ್ದೇನೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಆದರೆ ನನ್ನ ಮೇಲೆ ಹಲ್ಲೆ ಮಾಡಿದ ಅಪರಾಧಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ಯ್ಯದ ಮೇಲಿನ ಗಂಭೀರ ಬೆದರಿಕೆಯೆಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ತಾಲಿಬಾನ್ ಬಂಡುಕೋರರು ತಮ್ಮೊಡನೆ ಕೊಂಡೊಯ್ದ ನನ್ನ ಮೊಬೈಲ್, ಕ್ಯಾಮರಾ ಮತ್ತು ಇನ್ನಿತರ ತಾಂತ್ರಿಕ ಉಪಕರಣವನ್ನು ಹಿಂತಿರುಗಿಸಲಿಲ್ಲ. ನನ್ನ ಮೊಬೈಲನ್ನು ತಮ್ಮ ವಶದಲ್ಲಿಟ್ಟಿರುವ ತಾಲಿಬಾನಿಗಳು ನನ್ನ ಕುಟುಂಬದ ಮತ್ತು ಸ್ನೇಹಿತರ ಪ್ರತಿ ಕರೆಗಳನ್ನು ಸ್ವೀಕರಿಸಿ ಮನೆಯ ವಿಳಾಸದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಇದರ ಬಗ್ಗೆ ನಾನು ಚಿಂತಿತನಾಗಿದ್ದೇನೆ ಎಂದು ಝಿಯಾರ್ ಖಾನ್ ಅವರು ಟ್ವೀಟ್ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Join Whatsapp
Exit mobile version