ಭೋಪಾಲ್ : ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ‘ಜನಜಾತೀಯ ಗೌರವ್ ದಿವಸ್’ ಆದಿವಾಸಿ ಸಮ್ಮೇಳನಕ್ಕೆ ಹಾಜರಾಗಲು ಭೋಪಾಲ್‌ಗೆ ಆಗಮಿಸಲಿರುವ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲು ಮಧ್ಯಪ್ರದೇಶ ಸರಕಾರ ನಿರ್ಧರಿಸಿದೆ.
ನಗರದ ಜಂಬೋರಿ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಗೆ ಆಗಮಿಸುವ ಆದಿವಾಸಿಗಳನ್ನು ಕರೆತರುವ ಬಸ್ಸುಗಳಲ್ಲಿ ಮೆಕ್ಯಾನಿಕ್‌ಗಳೂ ಇರಲಿದ್ದು, ಒಂದು ವೇಳೆ ಪ್ರಯಾಣದ ವೇಳೆ ಬಸ್ಸುಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ದುರಸ್ತಿ ಪಡಿಸಲು ಇವರನ್ನು ಯೋಜಿಸಲಾಗಿದೆ.
ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸುವ ವಾಹನಗಳ ಜತೆಗೆ ಅಂಬುಲೆನ್ಸ್ಗಳೂ ಇರಬೇಕೆಂದು ಸರಕಾರ ಹೇಳಿದ್ದು ಬಸ್ಸುಗಳ ಚಾಲಕರಿಗೆ ಬ್ರೀತ್-ಅನೈಲಸರ್ ಪರೀಕ್ಷೆಗಳನ್ನೂ ನಡೆಸಲಾಗುವುದು.ಈ ಕಾರ್ಯಕ್ರಮದ ಏರ್ಪಾಟುಗಳ ಕುರಿತಂತೆ ಚರ್ಚಿಸಲು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಹಿಸಿದ್ದರು.