ಟೋಕಿಯೋ: ಭಾರತದ ಯುವ ಗಾಲ್ಫರ್ ಅದಿತಿ ಅಶೋಕ್, ಒಲಿಂಪಿಕ್ಸ್ ಗಾಲ್ಫ್ ಕ್ರೀಡೆಯಲ್ಲಿ ಐತಿಹಾಸಿಕ ಪದಕ ಗೆಲ್ಲುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದಾರೆ.
23 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್ ಮೊದಲ ಬಾರಿಗೆ ಒಲಿಂಪಿಕ್ಸ್ ನ ಗಾಲ್ಫ್ ಕೋರ್ಟ್ ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದರು.
ಮೊದಲ ಮೂರು ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ ಪದಕ ಬೇಟೆಯಲ್ಲಿದ್ದ ಅದಿತಿ, ಶನಿವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಇದರಿಂದಾಗಿ ಎರಡನೇ ಸ್ಥಾನದಲ್ಲಿದ್ದ ಅದಿತಿ ನಾಲ್ಕನೇ ಸ್ಥಾನಕ್ಕೆ ಕುಸಿದರು.
ಎರಡನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ಸರ್ಧಿಸುತ್ತಿರುವ 23 ವರ್ಷದ ಬೆಂಗಳೂರು ಮೂಲದ ಅದಿತಿ, ಒಲಿಂಪಿಕ್ಸ್ ಗಾಲ್ಫ್ ಇತಿಹಾಸದಲ್ಲೇ ಭಾರತದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ನಲ್ಲಿ ಅದಿತಿ 41ನೇ ಸ್ಥಾನ ಗಳಿಸಿದ್ದರು. ಅಮೆರಿಕದ ನೆಲ್ಲಿ ಕೊರ್ಡಾ ಚಿನ್ನದ ಪದಕ ಗೆದ್ದುಕೊಂಡರು.