ದಕ್ಷಿಣ ಆಫ್ರಿಕಾ: ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ನ (U19 World Cup 2024) ಸೂಪರ್ 6 ಸುತ್ತಿನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ಬ್ಲೋಮ್‌ಫಾಂಟೈನ್‌ನ ಮಂಗಾಂಗ್ ಓವಲ್‌ನಲ್ಲಿ ಪಂದ್ಯ ನಡೆಯಲಿದೆ.
ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಸೂಪರ್ 6 ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ 214 ರನ್‌ಗಳ ದೊಡ್ಡ ಜಯ ಸಾಧಿಸಿತ್ತು.
ಬ್ಲೋಮ್‌ಫಾಂಟೈನ್‌ನ ಮಂಗಾಂಗ್ ಓವಲ್ ಪಿಚ್ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೂ ಕೊಂಚ ಸಹಾಯ ಮಾಡುತ್ತದೆ. ಹೀಗಾಗಿ ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಲು ಸಾಕಷ್ಟು ಅವಕಾಶವಿದೆ.
ಭಾರತ ಮತ್ತು ನೇಪಾಳ ನಡುವಿನ ಸೂಪರ್ ಸಿಕ್ಸ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ.
ಭಾರತ ತಂಡ: ಉದಯ್ ಸಹರನ್ (ನಾಯಕ), ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಅರವೇಲಿ ಅವನೀಶ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ಸೌಮ್ಯ ಪಾಂಡೆ, ರಾಜ್ ಲಿಂಬಾನಿ, ನಮನ್ ತಿವಾರಿ, ಆರಾಧ್ಯ ಶುಕ್ಲಾ, ರುದ್ರ ಪಟೇಲ್, ಪ್ರೇಮ್ ದಿಯೋಕರ್, ಮೊಹಮ್ಮದ್ ಅಮನ್ ಮತ್ತು ಅಂಶ್ ಗೋಸಾಯಿ.
ನೇಪಾಳ ತಂಡ : ದೇವ್ ಖಾನಲ್ (ನಾಯಕ), ಅರ್ಜುನ್ ಕುಮಾಲ್, ಬಿಪಿನ್ ರಾವಲ್ (ವಿಕೆಟ್ ಕೀಪರ್), ಆಕಾಶ್ ತ್ರಿಪಾಠಿ, ಗುಲ್ಸನ್ ಝಾ, ದೀಪಕ್ ದುಮ್ರೆ, ದೀಪಕ್ ಬೋಹ್ರಾ, ದೀಪೇಶ್ ಕಾಂಡೇಲ್, ಸುಭಾಷ್ ಭಂಡಾರಿ, ತಿಲಕ್ ಭಂಡಾರಿ, ಆಕಾಶ್ ಚಂದ್, ಉತ್ತಮ್ ಥಾಪಾ ಮಗರ್, ದುರ್ಗೇಶ್ ಗುಪ್ತಾ, ಹೇಮಂತ್ ಧಾಮಿ, ಬಿಶಾಲ್ ಬಿಕ್ರಮ್ ಕೆಸಿ ಮತ್ತು ದೀಪಕ್ ಬೋಹ್ರಾ.