ಅಶಿಸ್ತಿನ ವರ್ತನೆಗಾಗಿ ಟಿಎಂಸಿ ಸಂಸದ ಸಂತನು ಸೇನ್ ರಾಜ್ಯಸಭೆಯಿಂದ ಅಮಾನತು

Prasthutha|

ನವದೆಹಲಿ : ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆಯ ಕಾರಣಕ್ಕಾಗಿ ಶುಕ್ರವಾರ ತೃಣಮೂಲ ಕಾಂಗ್ರೆಸ್ ಸಂಸದ ಸಂತನು ಸೇನ್ ಅ ವರನ್ನು ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ.

- Advertisement -


ಗುರುವಾರ ಸಂಸತ್ ಅಧಿವೇಶನ ನಡೆಯುತ್ತಿದ್ದ ವೇಳೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪೆಗಾಸೆಸ್ ಕುರಿತು ಹೇಳೀಕೆ ನೀಡಲು ಎದ್ದು ನಿಂತಾಗ ಅವರ ಕೈಯಲ್ಲಿದ್ದ ಪತ್ರವನ್ನು ತೃಣಮೂಲ ಕಾಂಗ್ರೆಸ್ ಸಂಸದ ಸಂತನು ಸೇನ್ ಕಿತ್ತು ಹರಿದು ಹಾಕಿದ್ದರು. ಇದು ಅಶಿಸ್ತಿತ ವರ್ತನೆ ಎಂದು ಹೇಳಿದ ರಾಜ್ಯಸಭೆಯ ಅಧ್ಯಕ್ಷ ಎಂ. ವೆಂಕಯ್ಯನಾಯ್ಡು ಅವರು ಸದನದಿಂದ ಸೆನ್ ಅವರನ್ನು ಅಮಾನತುಗೊಳಿಸಿದರು.


ಪೆಗಾಸೆಸ್ ಕಣ್ಗಾವಲು ವಿಷಯ ಪ್ರಸ್ತಾಪಿಸಿ ಪ್ರತಿಪಕ್ಷಗಳು ಕೋಲಾಹಲವೆಬ್ಬಿಸಿದ್ದರಿಂದ ಅಧಿವೇಶನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯಸಭಾ ಅಧಿವೇಶನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

- Advertisement -

ಪೆಗಾಸೆಸ್ ಸ್ಪೈವೇರ್ ಮೂಲಕ ಫೋನ್ ಕದ್ದಾಲಿಕೆ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ವಜಾ ಮಾಡಬೇಕೆಂದು ಮತ್ತು ಈ ಬೆಳವಣಿಗೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದ ವಿರೋಧ ಪಕ್ಷದ ಸಂಸದರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಒಂದು ದಿನಕ್ಕೆ ಮುಂದೂಡಲಾಯಿತು. ಎಡಪಂಥೀಯ ಸಂಸದರು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆಗ್ರಹಿಸಿದ್ದಾರೆ.

ಇದಕ್ಕೂ ಮೊದಲು ರಾಜ್ಯಸಭೆಯಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸಂತನು ಸೇನ್ ಅವರನ್ನು ಉಳಿದ ಅಧಿವೇಶನದ ಅವಧಿಗೆ ಅಮಾನತುಗೊಳಿಸುವ ಕುರಿತು ನಿರ್ಣಯ ಮಂಡಿಸಿದ್ದರು.

Join Whatsapp