Home ಟಾಪ್ ಸುದ್ದಿಗಳು ಮುಂದಿನ ತಿಂಗಳು ಟಿಎಂಸಿಯ 50 ಶಾಸಕರು ಬಿಜೆಪಿಗೆ : ದಿಲೀಪ್ ಘೋಷ್ ಸವಾಲು

ಮುಂದಿನ ತಿಂಗಳು ಟಿಎಂಸಿಯ 50 ಶಾಸಕರು ಬಿಜೆಪಿಗೆ : ದಿಲೀಪ್ ಘೋಷ್ ಸವಾಲು

ಕೊಲ್ಕತಾ : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ 50 ಶಾಸಕರು, ಮುಂದಿನ ತಿಂಗಳು ಪಕ್ಷ ತೊರೆದು ತಮ್ಮ ಪಕ್ಷ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಟಿಎಂಸಿ ಅಂತ್ಯ ಸನಿಹದಲ್ಲಿದೆ. ಮುಂದಿನ ತಿಂಗಳಲ್ಲಿ 50 ಶಾಸಕರು ನಮ್ಮ ಪಕ್ಷ ಸೇರಲು ಸಿದ್ಧರಾಗಿದ್ದಾರೆ. ಟಿಎಂಸಿ ಕೈಯಿಂದ ಏನೂ ಮಾಡಲು ಸಾಧ್ಯವಿಲ್ಲ. ಒಂದೇ ಒಂದು ಬೂತ್ ಅಧ್ಯಕ್ಷನನ್ನೂ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಅವರಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಟಿಎಂಸಿಯ ಏಳು ಶಾಸಕರು ಬಿಜೆಪಿ ಸೇರಿರುವ ಬಗ್ಗೆ ಮಾತನಾಡಿದ್ದ ಟಿಎಂಸಿ ನಾಯಕ ಮಲ್ಲಿಕ್ ಬಾಬು, ಬಿಜೆಪಿ ಸೇರಿರುವ ಶಾಸಕರೆಲ್ಲರೂ ಮರಳಿ ಪಕ್ಷಕ್ಕೆ ವಾಪಾಸಾಗಲು ಸಿದ್ಧರಾಗಿದ್ದಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ದಿಲೀಪ್ ಘೋಷ್ ಈ ಹೇಳಿಕೆ ನೀಡಿದ್ದಾರೆ.  

Join Whatsapp
Exit mobile version