Home ಟಾಪ್ ಸುದ್ದಿಗಳು ಪಶ್ಚಿಮ ಬಂಗಾಳದಲ್ಲಿ ಮತ್ತೆ ರಕ್ತದೋಕುಳಿ: ಟಿಎಂಸಿ ಮುಖಂಡ ಸೇರಿ ಮೂವರ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ಮತ್ತೆ ರಕ್ತದೋಕುಳಿ: ಟಿಎಂಸಿ ಮುಖಂಡ ಸೇರಿ ಮೂವರ ಹತ್ಯೆ

ಕೊಲ್ಕತ್ತಾ: ಮಮತಾ ಬ್ಯಾನರ್ಜಿ ಆಳ್ವಿಕೆಯ ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ರಕ್ತ ರಕ್ತದೋಕುಳಿ ನಡೆದಿದ್ದು, ಜನನಿಬಿಡ ಪ್ರದೇಶದಲ್ಲಿಯೇ ಟಿಎಂಸಿ ಮುಖಂಡ ಹಾಗೂ ಇಬ್ಬರು ಕಾರ್ಯಕರ್ತರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಬೆಳಗ್ಗೆ ಕೋಲ್ಕತ್ತಾದಿಂದ ಸುಮಾರು 50 ಕಿಮೀ ದೂರದಲ್ಲಿರುವ ಕ್ಯಾನಿಂಗ್‌ನಲ್ಲಿ ಈ ಘಟನೆ ನಡೆದಿದೆ.  ಗೋಪಾಲಪುರ ಗ್ರಾಮ ಪಂಚಾಯತ್ ಸದಸ್ಯ ಸ್ವಪನ್ ಮಾಝಿ ಅವರು ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಭೆಗೆ ತೆರಳುತ್ತಿದ್ದಾಗ ಹಂತಕರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರಲ್ಲದೆ, ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ  ಟಿಎಂಸಿ ನಾಯಕನ ಜೊತೆ ಇದ್ದ  ಭಯಭೀತರಾಗಿ ಓಡಿಹೋದ  ಇಬ್ಬರು ಕಾರ್ಯಕರ್ತರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮೋಟಾರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಂದ ಈ ಹತ್ಯೆ ನಡೆದಿದೆ. ಈ ದಾಳಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ,

Join Whatsapp
Exit mobile version