Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಟಿಜೆ ಅಬ್ರಾಹಂ

ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಟಿಜೆ ಅಬ್ರಾಹಂ

ಬೆಂಗಳೂರು: ತಮ್ಮನ್ನು ಬೆದರಿಕೆ ಹಾಕುವವನು (ಬ್ಲ್ಯಾಕ್ ಮೇಲರ್) ಎಂದು ಕರೆದಿದ್ದಕ್ಕೆಟಿಜೆ ಅಬ್ರಾಹಂ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.


ಮುಡಾ ಪ್ರಕರಣದದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದ ಅರ್ಜಿದಾರರ ಪೈಕಿ ಟಿಜೆ ಅಬ್ರಾಹಂ ಸಹ ಒಬ್ಬರಾಗಿದ್ದಾರೆ.
ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಸಿದ್ದರಾಮಯ್ಯ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್ಮೇಲರ್ ಮತ್ತು ಕೆಟ್ಟ ಪೂರ್ವಾಪರ ಹೊಂದಿರುವ ವ್ಯಕ್ತಿ ಎಂದು ಕರೆದಿದ್ದಾರೆ ಎಂದು ಪಿಟಿಐಗೆ ಹೇಳಿಕೆ ನೀಡಿರುವ ಅಬ್ರಹಾಂ ಆರೋಪಿಸಿದ್ದಾರೆ.


ನೀವು (ಸಿದ್ದರಾಮಯ್ಯ) ನಕಲಿ ಮತ್ತು ಅಕ್ರಮ ಹಕ್ಕು ಸೃಷ್ಟಿಸಿ 14 ಸೈಟ್ ಗಳನ್ನು ತೆಗೆದುಕೊಂಡಿದ್ದೀರಿ ಮತ್ತು ನೀವು ನನ್ನನ್ನು ಬ್ಲ್ಯಾಕ್ಮೇಲರ್ ಎಂದು ಕರೆಯುತ್ತೀರಿ! ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನೀವು ಹೇಗೆ ತಪ್ಪಿಸಿಕೊಳ್ಳುತ್ತೀರಿ ಎಂದು ನಾವು ನೋಡುತ್ತೇವೆ ಎಂದು ಅಬ್ರಾಹಂ ಹೇಳಿದರು.

Join Whatsapp
Exit mobile version