Home ಟಾಪ್ ಸುದ್ದಿಗಳು ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಎಸ್ ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಎಸ್ ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

ದೆಹಲಿ: ತಿರುಪತಿ ಲಡ್ಡುಗಳ ಕಲಬೆರಕೆ ಪ್ರಕರಣವು ಸುಪ್ರೀಂಕೋರ್ಟ್ ನ ವ್ಯಾಪ್ತಿಯಲ್ಲಿರುವುದರಿಂದ ವಿಶೇಷ ತನಿಖಾ ತಂಡ (ಎಸ್ ಐಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರಪ್ರದೇಶ ಡಿಜಿಪಿ ಮಂಗಳವಾರ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.


“ಮೊದಲು ಅವರು (ಎಸ್ ಐಟಿ) ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು, ಅದನ್ನು ಅಧ್ಯಯನ ಮಾಡಬೇಕು ಮತ್ತು ಎಲ್ಲಾ ಮಾಹಿತಿಯನ್ನು ತೆಗೆದುಕೊಳ್ಳಬೇಕು, ಆದರೆ ಈ ಮಧ್ಯೆ, ಸುಪ್ರೀಂಕೋರ್ಟ್ ನಿಂದ ಆದೇಶ ಬಂದಿದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಅದನ್ನು (ತನಿಖೆ) ನಿಲ್ಲಿಸಿದ್ದೇವೆ” ಎಂದು ಆಂಧ್ರದ ಉನ್ನತ ಪೊಲೀಸ್ ಅಧಿಕಾರಿ ದ್ವಾರಕಾ ತಿರುಮಲ ರಾವ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಸೋಮವಾರ, ಎಸ್ ಐಟಿ ತಿರುಮಲದ ಹಿಟ್ಟಿನ ಗಿರಣಿಯಲ್ಲಿ ತುಪ್ಪವನ್ನು ಸಂಗ್ರಹಿಸಿ, ಲಡ್ಡುಗಳನ್ನು ತಯಾರಿಸಲು ಬಳಸುವ ಮೊದಲು ಲ್ಯಾಬ್ ನಲ್ಲಿ ಪರೀಕ್ಷಿಸಲಾಯಿತು.


ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂಬ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಹಿರಂಗ ಹೇಳಿಕೆಯನ್ನು ಸೋಮವಾರ, ಸುಪ್ರೀಂಕೋರ್ಟ್ ಗಮನಿಸಿದಾಗ, ರಾಜಕೀಯದಿಂದ ದೇವರುಗಳನ್ನು ದೂರವಿಡಬೇಕು ಎಂದಿದೆ.

Join Whatsapp
Exit mobile version