ಟಿಪ್ಪು ಸುಲ್ತಾನ್ ದೇಶಪ್ರೇಮಕ್ಕೆ ಹೆಸರುವಾಸಿ: ಎಚ್.ಡಿ.ದೇವೇಗೌಡ

Prasthutha|

ಬೆಂಗಳೂರು: ರಾಜ್ಯಾದ್ಯಂತ ಇಂದು ಟಿಪ್ಪು ಸುಲ್ತಾನರ ಜಯಂತಿಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನಮನ ಸಲ್ಲಿಸಿದ್ದು, ದೇಶಪ್ರೇಮ ಮತ್ತು ಮಾದರಿ ಆಡಳಿತಕ್ಕೆ ಟಿಪ್ಪು ಹೆಸರುವಾಸಿ ಎಂದು ಹೇಳಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಶ್ರೀ ಟಿಪ್ಪು ಸುಲ್ತಾನರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ದೇಶಪ್ರೇಮ ಮತ್ತು ಮಾದರಿ ಆಡಳಿತಕ್ಕೆ ಹೆಸರುವಾಸಿಯಾದ ಟಿಪ್ಪುರವರನ್ನು ಇಂದು ಸ್ಮರಿಸೋಣ’ ಎಂದು ಕರೆ ನೀಡಿದ್ದಾರೆ.

Join Whatsapp
Exit mobile version