Home ಟಾಪ್ ಸುದ್ದಿಗಳು ಮೈಸೂರು ಏರ್‌ ಪೋರ್ಟ್‌ ಗೆ ಟಿಪ್ಪು ಸುಲ್ತಾನ್ ಹೆಸರಿಡಿ ಅಂತಾ ಕೇಳೋದ್ರಲ್ಲಿ ತಪ್ಪೇನೂ ಇಲ್ಲ: ದಿನೇಶ್...

ಮೈಸೂರು ಏರ್‌ ಪೋರ್ಟ್‌ ಗೆ ಟಿಪ್ಪು ಸುಲ್ತಾನ್ ಹೆಸರಿಡಿ ಅಂತಾ ಕೇಳೋದ್ರಲ್ಲಿ ತಪ್ಪೇನೂ ಇಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಮೈಸೂರು ಏರ್‌ ಪೋರ್ಟ್‌ ಗೆ ಟಿಪ್ಪು ಸುಲ್ತಾನ್ ಹೆಸರಿಡಿ ಅಂತಾ ಕೇಳೋದ್ರಲ್ಲಿ ತಪ್ಪೇನೂ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಗೆ ಕೇಂದ್ರದ ತಂಡ ಬರಲಿ ಅವರು ನೋಡಲಿ ಏಕೆಂದರೆ ಇದು ಮಹಿಳೆಯ ಮೇಲೆ ಆಗಿರುವ ದೌರ್ಜನ್ಯ. ಎಲ್ಲರೂ ಖಂಡಿಸಲೇಬೇಕು. ಈ ವಿಚಾರದ ಬಗ್ಗೆ ಪೊಲೀಸರಿಗೆ ಗೊತ್ತಾದ ತಕ್ಷಣ ಕ್ರಮ ತೆಗೆದುಕೊಂಡಿದ್ದಾರೆ. ಕ್ರಮ ತೆಗೆದುಕೊಂಡಿಲ್ಲ ಅಂತ ಏನಿಲ್ಲ . ಮುಂದೆ ಏನಾಗಬೇಕು ಎಂಬುದು ಕಾನೂನು ಪ್ರಕಾರ ಆಗಲಿದೆ ಎಂದರು.

ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಎಲ್ಲೆಡೆ ಪರ ವಿರೋಧ ವ್ಯಕ್ತವಾಗುತ್ತಿದೆ. ಆ ಕುರಿತು ಕೇಳಿದ ಪ್ರಶ್ನೆಗೆ, ನನಗೆ ಈ ಬಗ್ಗೆ ಇದುವರೆಗೂ ಈ ಬಗ್ಗೆ ಮಾಹಿತಿ ಇಲ್ಲ. ಟಿಪ್ಪು ಹೆಸರು ಇಡಿ ಅಂತ ಕೇಳೋದ್ರಲ್ಲಿ ತಪ್ಪೇನೂ ಇಲ್ಲ ಎಂದರು.

Join Whatsapp
Exit mobile version