Home ಟಾಪ್ ಸುದ್ದಿಗಳು ಒಡಿಶಾದಲ್ಲಿ ಬಿಸಿಲ ಬೇಗೆ: ಶಾಲೆಗಳ ಸಮಯ ಪರಿಷ್ಕೃರಣೆ

ಒಡಿಶಾದಲ್ಲಿ ಬಿಸಿಲ ಬೇಗೆ: ಶಾಲೆಗಳ ಸಮಯ ಪರಿಷ್ಕೃರಣೆ

ಭುವನೇಶ್ವರ: ಒಡಿಶಾ ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ರಾಜ್ಯದ ಶಾಲೆಗಳ ಸಮಯವನ್ನು ಪರಿಷ್ಕರಣೆ ಮಾಡಿದೆ.

ಮೇ 2 ರಿಂದ ಶಾಲೆಗಳು ಬೆಳಿಗ್ಗೆ 6 ರಿಂದ 9 ರವರೆಗೆ ಭೌತಿಕ ತರಗತಿಗಳನ್ನು ನಡೆಸುತ್ತವೆ ಎಂದು ಶಿಕ್ಷಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.
ಸರಕಾರವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಎಲ್ಲಾ ಶಾಲೆಗಳಲ್ಲಿ ಬೋಧನಾ ಸಮಯವನ್ನು ಮೇ 2,2022ಕ್ಕೆ ಅನ್ವಯವಾಗುವಂತೆ ಬೆಳಿಗ್ಗೆ 6.00 ರಿಂದ 9.00 ರವರೆಗೆ ನಿಗದಿಪಡಿಸಲು ಮುಂದಾಗಿದೆ.

Join Whatsapp
Exit mobile version