ಕೊಚ್ಚಿ: ಭಾನುವಾರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ 2019ರ ಮಿಸ್ ಕೇರಳ ಅನ್ಸಿ ಕಬೀರ್ (24) ಹಾಗೂ ಅದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ದಾರುಣವಾಗಿ ಮೃತಪಟ್ಟಿದ್ದರು. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ರಸ್ತೆ ಬದಿಯಲ್ಲಿದ್ದ ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದರು.
ಇದೀಗ ಅಪಘಾತಕ್ಕೂ ಒಂದು ದಿನ ಮುಂಚಿತವಾಗಿ ಅನ್ಸಿ ಕಬೀರ್ ಪೋಸ್ಟ್ ಮಾಡಿದ್ದ ವೀಡಿಯೋ ಹಾಗೂ ಅದರ ಜೊತೆಗೆ ಆಕೆ ನೀಡಿದ್ದ ಕ್ಯಾಪ್ಶನ್ ಸಾಕಷ್ಟು ವೈರಲ್ ಆಗಿದೆ. ಹಚ್ಚ ಹಸಿರಿನ ಸ್ಥಳದಲ್ಲಿ ಬಿಳಿ ವಸ್ತ್ರ ತೊಟ್ಟು ನಡೆದಾಡುತ್ತಿರುವ ವೀಡಿಯೋ ಪೋಸ್ಟ್ ಮಾಡಿ ಅದರ ಕೆಳಗಡೆ IT’S TIME TO GO… ಹೋಗುವ ಸಮಯ ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಇದಾದ ಮರುದಿನವೇ ಅನ್ಸಿ ಕಬೀರ್ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾರೆ. ಈಕೆಯ ಪೋಸ್ಟ್’ ಕೆಳಗಡೆ ಹಲವರು ಬೇಸರದಿಂದಲೇ ಕಮೆಂಟ್ ಮಾಡಿದ್ದಾರೆ.