ಮಲ್ಪೆ ಬೀಚ್ ನಲ್ಲಿ ಸೆ.15 ರವರೆಗೆ ಸಮುದ್ರಕ್ಕಿಳಿಯದಂತೆ ಆದೇಶ !

Prasthutha|

ಉಡುಪಿ : ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಹಾಗೂ ಇತ್ತೀಚೆಗೆ ಕೊಡಗಿನ ವಿದ್ಯಾರ್ಥಿನಿಯೊರ್ವಳು ಸಮುದ್ರ ಪಾಲಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬುಧವಾರ ಮಲ್ಪೆ ಬೀಚ್ ಸುತ್ತ ಸುರಕ್ಷತಾ ಕ್ರಮವಾಗಿ ತಡೆಬೇಲಿ ನಿರ್ಮಿಸಲಾಗಿದೆ.

- Advertisement -

ಎಚ್ಚರಿಕೆ ಮಧ್ಯೆಯೂ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೀಚ್‌ಗೆ ಆಗಮಿಸಿ ಸಮುದ್ರದ ನೀರಿನಲ್ಲಿ ಆಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ತಡೆಯುವ ಉದ್ದೇಶದಿಂದ ಮಲ್ಪೆ ಬೀಚ್ ಅಭಿವೃದ್ಧಿ ಪ್ರಾಧಿಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

ಸಮುದ್ರಕ್ಕೆ ಇಳಿದರೆ ದಂಡ

- Advertisement -

ಪ್ರವಾಸಿಗರು ಬೀಚ್‌ನಲ್ಲಿ ಹಾಕಲಾಗಿರುವ ಬಲೆಯನ್ನು ಮುರಿದು ಸಮುದ್ರಕ್ಕೆ ಇಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಬ್ಯಾನರ್ ಹಾಕಿ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ವಿಳಾಸ ವ್ಯವಸ್ಥೆಗಳ ಮೂಲಕ ಕೂಡ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧ ವಾಗಿರುವುದರಿಂದ ಕಡಲ ತೀರದಲ್ಲಿರುವ ಲೈಫ್ ಗಾರ್ಡ್ ಕೂಡ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ. ಆದುದರಿಂದ ಯಾವುದೇ ಪ್ರವಾಸಿಗರು ಸಮುದ್ರ ತೀರದಲ್ಲಿ ಅಳವಡಿಸಿರುವ ಬಲೆಯನ್ನು ದಾಟಿ ಮುಂದಕ್ಕೆ ಹೋಗಬಾರದು ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

Join Whatsapp