ಚಿಕಾಗೋ: ವಿಶ್ವದಾದ್ಯಂತ ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಟಿಕ್ ಟಾಕ್ ತಾರೆ ಖಾಬಿ ಲೇಮ್ ಅವರು ಕೊನೆಗೂ ತನ್ನ ಧರ್ಮವನ್ನು ಬಹಿರಂಗಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಖ್ಯಾತ ತಾರೆ ಖಾಬಿ ಲೇಮ್, ಇಸ್ಲಾಮ್ ಧರ್ಮವನ್ನು ಅನುಸರಿಸುವುದಲ್ಲದೆ ಪವಿತ್ರ ಕುರ್’ಆನ್ ಅನ್ನು ಕಂಠಪಾಠ ಮಾಡಿರುವುದಾಗಿ ಘೋಷಿಸಿದ್ದಾರೆ.
ತನ್ನ ಧರ್ಮದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾಬಿ ಲೇಮ್, ಹೌದು ನಾನು ಮುಸ್ಲಿಮ್, ಇಸ್ಲಾಮ್ ಧರ್ಮವನ್ನು ಅನುಸರಿಸುತ್ತಿದ್ದೇನೆ. ಬೇರೆ ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಎಂದು ತಿಳಿಸಿದರು.
ಸೆನೆಗಲ್’ನಲ್ಲಿ ಜನಿಸಿದ 22 ವರ್ಷದ ಲೇಮ್ ಒಂದು ವರ್ಷದ ಮಗುವಿರುವಾಗ ಅವರ ಕುಟುಂಬ ಇಟೆಲಿಗೆ ಸ್ಥಳಾಂತರಗೊಂಡಿತ್ತು. 14 ವರ್ಷದವನಾಗಿದ್ದ ವೇಳೆ ಲೇಮ್ ನ್ನು ಸೆನೆಗಲ್’ನ ಡಾಕರ್ ಸಮೀಪ ಕುರ್’ಆನ್ ಶಾಲೆಗೆ ಸೇರಿಸಲಾಗಿತ್ತು.
ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ತಿಂಗಳು ಖಾಬಿ ಲೇಮ್ ಅವರನ್ನು ಟಿಕ್ ಟಾಕ್ ಹೊಸ ಚಾಂಪಿಯನ್ ಆಗಿ ಘೋಷಿಸಲಾಯಿತು. ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟು 143.2 ಮಿಲಿಯನ್ ಅನುಯಾಯಿಗಳನ್ನು ಸಂಪಾದಿಸಿದ್ದಾರೆ.
ಖಾಬಿ ಲೇಮ್ ನಂತರದ ಸ್ಥಾನದಲ್ಲಿರುವ ಚಾರ್ಲಿ ಡಿ ಅಮೆಲಿಯೋ ಅವರು ಸುಮಾರು 142.3 ಮಿಲಿಯನ್ ಟಿಕ್ ಟಾಕ್ ಅನುಯಾಯಿಗಳನ್ನು ಹೊಂದಿದ್ದಾರೆ.