Home ಟಾಪ್ ಸುದ್ದಿಗಳು ಭಾರತದಿಂದ ನಿಷೇಧಗೊಳಪಟ್ಟರೂ ಅಳುಕದೇ ಯಥಾಸ್ಥಿತಿ ಕಾಯ್ದುಕೊಂಡ ಟಿಕ್ ಟಾಕ್!

ಭಾರತದಿಂದ ನಿಷೇಧಗೊಳಪಟ್ಟರೂ ಅಳುಕದೇ ಯಥಾಸ್ಥಿತಿ ಕಾಯ್ದುಕೊಂಡ ಟಿಕ್ ಟಾಕ್!

ಟಿಕ್ ಟಾಕ್ ಗೊತ್ತಿಲ್ಲದವರು ಯಾರಿಲ್ಲ. ಬಹುತೇಕರಿಗೆ ಈ ಆ್ಯಪ್ ಬಗ್ಗೆ ಗೊತ್ತಿದೆ. ಭಾರತದಲ್ಲಿಯೂ ಈ ಆ್ಯಪ್ ಬಳಕೆದಾರರ ಸಂಖ್ಯೆ ಅನೇಕರಿದ್ದರು. ಆದರೆ ಕೇಂದ್ರ ಸರ್ಕಾರ ಚೀನಿ ಆ್ಯಪ್ಗಳನ್ನು ಬ್ಯಾನ್ ಮಾಡಿದ ಸಮಯದಲ್ಲಿ ಟಿಕ್ಟಾಕ್ ಆ್ಯಪ್ ಕೂಡ ನಿಷೇಧವಾಯಿತು. ಈಗ ಭಾರತೀಯರಿಗೆ ಈ ಆ್ಯಪ್ ಬಳಕೆಗೆ ಸಿಗುವುದಿಲ್ಲ. ಭಾರತದಂತಹ ಬಲಿಷ್ಟ ಜನಸಂಖ್ಯೆಯ ರಾಷ್ಟ್ರದಿಂದ ನಿಷೇಧಗೊಳಪಟ್ಟರೂ ವಿಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. 2021 ರ ಅಕ್ಟೋಬರ್‌ನಲ್ಲಿ ವಿಶ್ವದ ಅತಿ ಹೆಚ್ಚು ಡೌನ್‌ಲೋಡ್ ಮಾಡಿದ ಆ್ಯಪ್ಗಳ ಪಟ್ಟಿಯಲ್ಲಿ ಮತ್ತೆ ಟಿಕ್‌ಟಾಕ್ ಅಗ್ರಸ್ಥಾನದಲ್ಲಿದೆ.

ಟಿಕ್‌ಟಾಕ್ ಅಪ್ಲಿಕೇಶನ್ ಡೌನ್‌ಲೋಡ್‌ಗಳು 57 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಸೆನ್ಸಾರ್ ಟವರ್‌ನ ಸ್ಟೋರ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಡೇಟಾ ತೋರಿಸಿದೆ. ಟಿಕ್‌ಟಾಕ್‌ನ ಹೆಚ್ಚಿನ ಡೌನ್‌ಲೋಡ್‌ಗಳು ಚೀನಾದ ಡೌಯಿನ್‌ನಿಂದ 17 ಪ್ರತಿಶತ ಮತ್ತು ಯುನೈಟೆಡ್ ಸ್ಟೇಟ್ಸ್ ನಿಂದ 11 ಪ್ರತಿಶತದಷ್ಟಿದೆ. ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಾಗ್ರಾಮ್ 2ನೇ ಸ್ಥಾನದಲ್ಲಿದೆ.

2020 ರಲ್ಲಿಯೂ ಹೆಚ್ಚು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್ ಎಂಬ ಹೆಗ್ಗಳಿಕೆ ಟಿಕ್‌ಟಾಕ್ ಪಡೆದಿತ್ತು. ಇದೀಗ 2021ರಲ್ಲಿಯೂ ಟಿಕ್ಟಾಕ್ ವಿಶ್ವಾದ್ಯಂತ ಅಗ್ರ ಐದು ಡೌನ್‌ಲೋಡ್‌ ಆ್ಯಪ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಅಪ್ಲಿಕೇಶನ್ ಆಗಿದೆ.

56 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್‌ಗಳೊಂದಿಗೆ ವಿಶ್ವದಾದ್ಯಂತ ಹೆಚ್ಚಿನ ಡೌನ್‌ಲೋಡ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ನ್‌ಸ್ಟಾಗ್ರಾಮ್ಪಡೆದುಕೊಂಡಿದೆ. ಇದು ಹಿಂದಿನ ತಿಂಗಳಿಗಿಂತ 31 ಶೇಕಡಾ ಹೆಚ್ಚಳವಾಗಿದೆ.

ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ಜೊತೆಗೆ, ಫೇಸ್‌ಬುಕ್, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಅಕ್ಟೋಬರ್ 2021 ರ ಡೌನ್‌ಲೋಡ್ ಮಾಡಲಾದ ಟಾಪ್ 5 ಆ್ಯಪ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಸ್ಥಾನ ಪಡೆದಿದೆ. ಸ್ನ್ಯಾಪ್‌ಚಾಟ್, ಮೆಸೆಂಜರ್, ಶಾಪಿಂಗ್ ಅಪ್ಲಿಕೇಶನ್ – ಮೀಶೋ, ಸ್ಪಾಟಿಫ್ ಮತ್ತು ವಿಡಿಯೋ ಎಡಿಟರ್ – ಕ್ಯಾಪ್‌ಕಟ್ ಸಹ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಶಾಪಿಂಗ್ ಅಪ್ಲಿಕೇಶನ್ ಮೀಶೋ ಒಟ್ಟಾರೆ ಡೌನ್‌ಲೋಡ್‌ಗಳ ಮೂಲಕ ಟಾಪ್ 10 ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ, ಇದು 12 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ ಆಗಿದೆ.

ಕಳೆದ ವರ್ಷ ಭಾರತ ಸರ್ಕಾರವು ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಟಿಕ್ ಟಾಕ್ ಬ್ಯಾನ್ ಮಾಡಿದೆ. CamScanner ಮತ್ತು PUBG ಮೊಬೈಲ್ ಸೇರಿದಂತೆ ಸುಮಾರು 58 ಇತರ ಚೀನೀ ಮೂಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಆದರೂ ಟಿಕ್‌ಟಾಕ್ ಇತರ ದೇಶಗಳಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುತ್ತಿದೆ.

Join Whatsapp
Exit mobile version